ದೇಶ

ಸೋನಾಲಿ ಫೋಗಟ್ ಸಾವು: ಮರಣೋತ್ತರ ಪರೀಕ್ಷೆಯ ಸಂಪೂರ್ಣ ವಿಡಿಯೋ ಚಿತ್ರೀಕರಣಕ್ಕೆ ಕುಟುಂಬಸ್ಥರ ಷರತ್ತು!

Nagaraja AB

ಪಣಜಿ: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಗೋವಾದಲ್ಲಿ ನಿಧನರಾದ ಎರಡು ದಿನಗಳ ನಂತರ, ಮರಣೋತ್ತರ ಪರೀಕ್ಷೆ ಅಥವಾ ವಿಧಿ ವಿಜ್ಞಾನ ಪರೀಕ್ಷೆಗೆ ಒಪ್ಪಿಗೆ ನೀಡಲು ಒಪ್ಪಿದ್ದೇವೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ, ಆದರೆ ಮರಣೋತ್ತರ ಪರೀಕ್ಷೆಯ ಕಾರ್ಯವಿಧಾನವನ್ನು ವೀಡಿಯೊ ಚಿತ್ರೀಕರಣ ಮಾಡಬೇಕೆಂಬ ಷರತ್ತು ಹಾಕಿದ್ದಾರೆ.

ಈ ಹಿಂದೆ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು. ಆದರೆ, ತನ್ನ ಇಬ್ಬರು ಸಹಚರರಿಂದಲೇ ಸೋನಾಲಿ ಫೋಗಟ್ ಸಾವನ್ನಪ್ಪಿರುವುದಾಗಿ ಅವರ ಸಹೋದರ ರಿಂಕು ಢಾಕಾ ಆರೋಪಿಸಿದ್ದರು. ಇಬ್ಬರು ವ್ಯಕ್ತಿಗಳ ವಿರುದ್ಧ ಗೋವಾ ಪೊಲೀಸರು ಎಫ್‌ಐಆರ್ ಅಥವಾ ಪೊಲೀಸ್ ಪ್ರಕರಣ ದಾಖಲಿಸಿದ ನಂತರವೇ ಕುಟುಂಬದವರು ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಾಗಿ ಎಂದು ಅವರು ಹೇಳಿಕೆ ನೀಡಿದ್ದರು. 

ಇದೀಗ ಸಂಪೂರ್ಣ ಕಾರ್ಯವಿಧಾನವನ್ನು ವೀಡಿಯೊ-ಗ್ರಾಫ್ ಮಾಡುವ ಷರತ್ತಿನೊಂದಿಗೆ ಕುಟುಂಬವು ಶವಪರೀಕ್ಷೆಗೆ ಒಪ್ಪಿಗೆ ನೀಡಿದೆ ಎಂದು ಅವರ ಸೋದರಳಿಯ ಮಹಿಂದರ್ ಫೋಗಟ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಮರಣೋತ್ತರ ಪರೀಕ್ಷೆ ನಡೆಸಿದ ನಂತರ ನಮ್ಮ ದೂರಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT