5 ಜಿ (ಸಂಗ್ರಹ ಚಿತ್ರ) 
ದೇಶ

ದೀಪಾವಳಿ ವೇಳೆಗೆ ಮೆಟ್ರೋ ನಗರಗಳಲ್ಲಿ ಜಿಯೋ 5 ಜಿ: ಅಂಬಾನಿ 

ದೀಪಾವಳಿ ವೇಳೆಗೆ ಮೆಟ್ರೋ ನಗರಗಳಲ್ಲಿ 5 ಜಿ ಸೇವೆ ಲಭ್ಯವಾಗಲಿದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದಾರೆ.

ಮುಂಬೈ: ದೀಪಾವಳಿ ವೇಳೆಗೆ ಮೆಟ್ರೋ ನಗರಗಳಲ್ಲಿ 5 ಜಿ ಸೇವೆ ಲಭ್ಯವಾಗಲಿದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದಾರೆ. 

5ಜಿ ಟೆಲಿಫೋನಿ ಸೇವೆಗಳನ್ನು ನಿಯೋಜಿಸುವುದಕ್ಕಾಗಿ ಅಂಬಾನಿ ಸೋಮವಾರದಂದು 2 ಲಕ್ಷ ಕೋಟಿ ರೂಪಾಯಿ ಹೂಡಿಕೆಯನ್ನು ಘೋಷಿಸಿದರು.

ದೇಶದ ಅತಿ ದೊಡ್ಡ ಆಪರೇಟರ್ ಆಗಿರುವ ಜಿಯೋ, ಈಗಿರುವ 4 ಜಿ ನೆಟ್ವರ್ಕ್ ನ್ನು ನವೀಕರಿಸುವ ಬದಲು ಸ್ವತಂತ್ರ 5G ಸ್ಟಾಕ್ ನ್ನು ನಿಯೋಜಿಸಿದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ನ 45 ನೇ ಎಜಿಎಂ ನಲ್ಲಿ ಅಂಬಾನಿ ಹೇಳಿದ್ದಾರೆ.

ಇದನ್ನೂ ಓದಿ: ರಿಲಯನ್ಸ್ ರೀಟೇಲ್‌ಗೆ ಪುತ್ರಿ ಇಶಾ ಮುಖ್ಯಸ್ಥೆ ಎಂದು ಘೋಷಿಸಿದ ಮುಖೇಶ್ ಅಂಬಾನಿ!
 
ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಗಳಲ್ಲಿ 5 ಜಿ ಸೇವೆ ಜಾರಿಗೆ ಬರಲಿದೆ ಎಂದು ಅಂಬಾನಿ ತಿಳಿಸಿದ್ದು, 2023 ರ ವೇಳೆಗೆ 18 ತಿಂಗಳಲ್ಲಿ ಇಡೀ ಭಾರತದ ನಗರಗಳಲ್ಲಿ 5 ಜಿ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT