ದೇಶ

ಎಬಿವಿಪಿ ಪ್ರತಿಭಟನೆಯ ನಂತರ ಜೆಎನ್‌ಯು ರೆಕ್ಟರ್ ಅಜಯ್ ಕುಮಾರ್ ದುಬೆ ರಾಜೀನಾಮೆ

Lingaraj Badiger

ನವದೆಹಲಿ: ಆರ್‌ಎಸ್‌ಎಸ್ ಅಂಗಸಂಸ್ಥೆ ಎಬಿವಿಪಿ ನಡೆಸಿದ ಸರಣಿ ಪ್ರತಿಭಟನೆಯ ನಂತರ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ(ಜೆಎನ್ ಯು)ದ ರೆಕ್ಟರ್ ಅಜಯ್ ಕುಮಾರ್ ದುಬೆ ಅವರು ರಾಜೀನಾಮೆ ನೀಡಿದ್ದಾರೆ.

“ಪ್ರೊ. ಅಜಯ್ ಕುಮಾರ್ ದುಬೆ ಅವರು ವಿಶ್ವವಿದ್ಯಾನಿಲಯದ ರೆಕ್ಟರ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಮತ್ತು ಅದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಕ್ಷಮ ಪ್ರಾಧಿಕಾರವು ಅಂಗೀಕರಿಸಿದೆ ”ಎಂದು ಆಗಸ್ಟ್ 29 ರಂದು ಹೊರಡಿಸಿದ ಅಧಿಕೃತ ಸುತ್ತೋಲೆ ತಿಳಿಸಿದೆ.

ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಒಂದು ವಿಭಾಗವು ದುಬೆ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿತ್ತು ಮತ್ತು ಅವರ ರಾಜೀನಾಮೆಗೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ ನಡೆಸಿತ್ತು.

""ಜೆಎನ್‌ಯು ರೆಕ್ಟರ್‌ ರಾಜೀನಾಮೆ ನೀಡಿದ್ದಾರೆ. ವಿದ್ಯಾರ್ಥಿನಿಯರ ಫೆಲೋಶಿಪ್‌ಗಾಗಿ ರೆಕ್ಟರ್‌ ಮಾರಣಾಂತಿಕ ಹಲ್ಲೆ ನಡೆಸಿದ್ದರು, ಮಹಿಳಾ ಸಹೋದ್ಯೋಗಿಗಳಿಗೆ ಕಿರುಕುಳ ನೀಡಿದ್ದರು ಮತ್ತು ಕಾನೂನುಬಾಹಿರವಾಗಿ ಎನ್‌ಜಿಒಗಳನ್ನು ನಡೆಸುತ್ತಿದ್ದರು," ಎಂದು ಎಬಿವಿಪಿ ರಾಜ್ಯ ಮಾಧ್ಯಮ ಸಂಚಾಲಕ ಅಂಬುಜ್ ಆರೋಪಿಸಿದ್ದಾರೆ.

SCROLL FOR NEXT