ದೇಶ

ಸಿಬಿಐ ದಾಳಿ ನಂತರ ಸಿಸೋಡಿಯಾ ಪ್ರಾಮಾಣಿಕತೆ ದೇಶದ ಮುಂದೆ ಸಾಬೀತಾಗಿದೆ: ದೆಹಲಿ ಸಿಎಂ ಕೇಜ್ರಿವಾಲ್

Vishwanath S

ನವದೆಹಲಿ: ಮನೀಶ್ ಸಿಸೋಡಿಯಾ ಅವರ ಪ್ರಾಮಾಣಿಕತೆ ಮತ್ತು ದೇಶಪ್ರೇಮವು ಇಡೀ ರಾಷ್ಟ್ರದ ಮುಂದೆ ಸಾಬೀತಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.

ಸಿಸೋಡಿಯಾಗೆ ಸೇರಿದ ಬ್ಯಾಂಕ್ ಲಾಕರ್ ಅನ್ನು ಸಿಬಿಐ ಶೋಧಿಸಿದ್ದು ಅಲ್ಲಿ ಏನೂ ಕಂಡುಬಂದಿಲ್ಲ. ಇದೊಂದು ಕೊಳಕು ರಾಜಕೀಯದಿಂದ ಈ ಕ್ರಮವನ್ನು ಪ್ರಚೋದಿಸಲಾಗಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ಸಿಬಿಐನ ನಾಲ್ಕು ಸದಸ್ಯರ ತಂಡವು ಗಾಜಿಯಾಬಾದ್‌ನ ವಸುಂಧರಾದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಶೋಧ ನಡೆಸಿತು. ಈ ವೇಳೆ ಸಿಸೋಡಿಯಾ ಮತ್ತು ಅವರ ಪತ್ನಿ ಉಪಸ್ಥಿತರಿದ್ದರು.

ಮನೀಶ್‌ ಸಿಸೋಡಿಯಾ ಮನೆ ಹಾಗೂ ಲಾಕರ್‌ನಿಂದ ಏನೂ ಪತ್ತೆಯಾಗಿಲ್ಲ. ಸಿಬಿಐ ತನ್ನ ದಾಳಿಯಲ್ಲಿ ಏನನ್ನೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಮನೀಷ್‌ನ ಪ್ರಾಮಾಣಿಕತೆ ಮತ್ತು ದೇಶಭಕ್ತಿ ಇಡೀ ರಾಷ್ಟ್ರದ ಮುಂದೆ ಸಾಬೀತಾಗಿದೆ. ಇಡೀ ಕ್ರಿಯೆಯು ಕೊಳಕು ರಾಜಕೀಯದಿಂದ ಪ್ರಚೋದಿಸಲ್ಪಟ್ಟಿದೆ ಎಂಬುದು ಸ್ಪಷ್ಟವಾಗಿದೆ. ಈ ಕೊಳಕು ರಾಜಕೀಯ ನಿಲ್ಲುತ್ತದೆ ಮತ್ತು ನಮಗೆ ಕೆಲಸ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. 

ಲಾಕರ್ ನಲ್ಲಿ ಸಿಬಿಐಗೆ ಏನೂ ಸಿಗಲಿಲ್ಲ: ಸಿಸೋಡಿಯಾ

ಸಿಬಿಐ ತಂಡವು ಸುಮಾರು ಎರಡು ಗಂಟೆಗಳ ಕಾಲ ತಮ್ಮ ಹೆಸರಿನಲ್ಲಿರುವ ಲಾಕರ್ ಅನ್ನು ಪರಿಶೀಲಿಸಿದ ನಂತರ ತನಿಖಾ ಸಂಸ್ಥೆ ತನಗೆ 'ಕ್ಲೀನ್ ಚಿಟ್' ನೀಡಿದೆ ಎಂದ ಸಿಸೋಡಿಯಾ ಹೇಳಿದ್ದು, ಸಿಬಿಐ ಒತ್ತಡದಿಂದ ವರ್ತಿಸುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

'ಇಂದು ನನಗೆ ಸಿಬಿಐನಿಂದ ಕ್ಲೀನ್ ಚಿಟ್ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ. ನನ್ನ ಲಾಕರ್ ಅಥವಾ ನಿವಾಸದ ಹುಡುಕಾಟದಲ್ಲಿ ಅವರಿಗೆ ಏನೂ(ಅಪರಾಧಿ) ಸಿಕ್ಕಿಲ್ಲ' ಎಂದು ಸಿಸೋಡಿಯಾ ಹೇಳಿದರು.

ದೆಹಲಿ ಸರ್ಕಾರದ ಅಬಕಾರಿ ನೀತಿ 2022ರ ಅನುಷ್ಠಾನದಲ್ಲಿ ಆಪಾದಿತ ಅಕ್ರಮಗಳಿಗೆ ಸಂಬಂಧಿಸಿದಂತೆ ಏಜೆನ್ಸಿ ದಾಖಲಿಸಿದ ಎಫ್‌ಐಆರ್‌ನಲ್ಲಿ ಹೆಸರಿಸಲಾದ 15 ಜನರಲ್ಲಿ ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕರೂ ಸೇರಿದ್ದಾರೆ.

SCROLL FOR NEXT