ತೆಲಂಗಾಣ ಸಿಎಂ ಪುತ್ರಿ ಕವಿತಾ(ಸಂಗ್ರಹ ಚಿತ್ರ) 
ದೇಶ

ದೆಹಲಿ ಲಿಕ್ಕರ್ ನೀತಿ ಹಗರಣ: ತೆಲಂಗಾಣ ಸಿಎಂ ಪುತ್ರಿ ಕವಿತಾ ಹಾಗೂ ಇತರರಿಂದ ಆಪ್ ಸರ್ಕಾರಕ್ಕೆ 100 ಕೋಟಿ ರೂ. ಕಿಕ್ ಬ್ಯಾಕ್; ಇಡಿ ವರದಿ ಸಲ್ಲಿಕೆ

ದೆಹಲಿ ಅಬಕಾರಿ ನೀತಿ ಹಗರಣದ ಪ್ರಮುಖ ಆರೋಪಿ ವಿಜಯ್ ನಾಯರ್ ಅವರು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಗಂಭೀರ ಆರೋಪವನ್ನು ಜಾರಿ ನಿರ್ದೇಶನಾಲಯ ಮಾಡಿದೆ. ಅದು ಎಷ್ಟೆಂದರೆ ಕನಿಷ್ಟ 100 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು.

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಪ್ರಮುಖ ಆರೋಪಿ ವಿಜಯ್ ನಾಯರ್ ಅವರು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಗಂಭೀರ ಆರೋಪವನ್ನು ಜಾರಿ ನಿರ್ದೇಶನಾಲಯ ಮಾಡಿದೆ. ಅದು ಎಷ್ಟೆಂದರೆ ಕನಿಷ್ಟ 100 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು. ಅದು, ಶರತ್ ರೆಡ್ಡಿ, ಕೆ ಕವಿತ ಮತ್ತು ಮಗುಂತ ಶ್ರೀನಿವಾಸುಲು ರೆಡ್ಡಿ ಒಡೆತನದ ಸೌತ್ ಗ್ರೂಪ್ ನಿಂದ 100 ಕೋಟಿ ರೂಪಾಯಿಗಳಷ್ಟು ಲಂಚ ಪಡೆದಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕರ ಪರವಾಗಿ ಅವರಲ್ಲಿ ಕೆಲವರು ಸರ್ಕಾರದಲ್ಲಿದ್ದು ವಿಜಯ್ ನಾಯರ್ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಮತ್ತೊಂದು ವಿಶೇಷವೆಂದರೆ ಜಾರಿ ನಿರ್ದೇಶನಾಲಯ ತನಿಖೆ ವರದಿಯಲ್ಲಿ ಇದೇ ಮೊದಲ ಬಾರಿಗೆ ತೆಲಂಗಾಣ ಮುಖ್ಯಮಂತ್ರಿ, ಟಿಆರ್ ಎಸ್ ಪಕ್ಷದ ಸಂಸ್ಥಾಪಕ ಚಂದ್ರಶೇಖರ್ ರಾವ್ ಪುತ್ರಿ ಕವಿತಾ ಹೆಸರು ಪ್ರಸ್ತಾಪವಾಗಿದೆ. ಇವರು ತೆಲಂಗಾಣ ವಿಧಾನಪರಿಷತ್ತಿನ ಸದಸ್ಯೆ ಕೂಡ ಆಗಿದ್ದಾರೆ.

ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯ, ಬಂಧನಕ್ಕೀಡಾಗಿರುವ ಉದ್ಯಮಿ ಅಮಿತ್ ಅರೋರ ಅವರ ಕಸ್ಟಡಿಯನ್ನು ಕೇಳಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(PMLA) ತನಿಖೆಯಿಂದ ದೆಹಲಿ ಅಬಕಾರಿ ನೀತಿ 2021-22ರಲ್ಲಿ ಹಗರಣವಾಗಿದ್ದು ಬೆಳಕಿಗೆ ಬಂದಿದ್ದು ಅದರಲ್ಲಿ ಆಪ್ ನಾಯಕರ ಪಾತ್ರವಿದೆ, ಅವರಲ್ಲಿ ಕೆಲವರು ದೆಹಲಿ ಸರ್ಕಾರದ ಭಾಗವಾಗಿದ್ದಾರೆ, ರಾಜ್ಯದ ಅಬಕಾರಿ ಖಜಾನೆಯಿಂದ ಅಕ್ರಮವಾಗಿ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.

ದೆಹಲಿ ಅಬಕಾರಿ ನೀತಿಯನ್ನು ಹಲವು ಲೋಪದೋಷಗಳ ನಡುವೆ ಜಾರಿಗೆ ತರಲಾಗಿದ್ದು ಅದರ ಮೂಲಕ ಅಕ್ರಮ ಚಟುವಟಿಕೆ ನಡೆಸಲಾಗುತ್ತಿದೆ. ಇದು ಹಿಂಬಾಗಿಲಿನ ಮೂಲಕ ಅಕ್ರಮ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ, ಅತಿಯಾದ ಸಗಟು (12%) ಮತ್ತು ಹೆಚ್ಚಿನ ಚಿಲ್ಲರೆ (185%) ಲಾಭಾಂಶವನ್ನು ನೀಡಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿದೆ.

ಮದ್ಯ ಮಾರಾಟದಲ್ಲಿ ಸಗಟು ವ್ಯಾಪಾರಿಗಳಿಗೆ ಶೇಕಡಾ 13ರಷ್ಟು ಲಾಭಾಂಶವನ್ನು ಎಎಪಿ ನಾಯಕರಿಗೆ ಕಿಕ್‌ಬ್ಯಾಕ್ ನೀಡಲಾಗಿದೆ. ಇಲ್ಲಿಯವರೆಗೆ ನಡೆಸಲಾದ ತನಿಖೆಯ ಪ್ರಕಾರ, ವಿಜಯ್ ನಾಯರ್, ಆಪ್ ನಾಯಕರ ಪರವಾಗಿ ಸೌತ್ ಗ್ರೂಪ್ ಎಂಬ ಗುಂಪಿನಿಂದ ಕನಿಷ್ಠ  100 ಕೋಟಿ ರೂಪಾಯಿ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಬಂಧಿತ ಅಮಿತ್ ಅರೋರಾ ಬಹಿರಂಗಪಡಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಕೋರ್ಟ್ ಗೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT