ದೇಶ

'ಒಂದು ದೇಶ, ಒಂದು ವಿದ್ಯುತ್ ದರ' ನೀತಿ ಜಾರಿಗೆ ತರವಂತೆ ನಿತೀಶ್ ಕುಮಾರ್ ಒತ್ತಾಯ

Lingaraj Badiger

ಪಾಟ್ನಾ: ಹಲವು ರಾಜ್ಯಗಳು ಇತರರಿಗಿಂತ ಹೆಚ್ಚಿನ ದರದಲ್ಲಿ ವಿದ್ಯುತ್ ಖರೀದಿಸಬೇಕಾದ ಪರಿಸ್ಥಿತಿ ಇದೆ ಎಂದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, 'ಒಂದು ದೇಶ, ಒಂದು ವಿದ್ಯುತ್ ದರ' ನೀತಿ ಜಾರಿಗೆ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಿಹಾರದಲ್ಲಿ 15,871 ಕೋಟಿ ಮೌಲ್ಯದ ವಿದ್ಯುತ್ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ನಿತೀಶ್ ಕುಮಾರ್, ಇತರ ರಾಜ್ಯಗಳಿಗೆ ಹೋಲಿಸಿದರೆ ಬಿಹಾರ, ಕೇಂದ್ರ ಸರ್ಕಾರದ ವಿದ್ಯುತ್ ಸ್ಥಾವರಗಳಿಂದ ಹೆಚ್ಚಿನ ದರದಲ್ಲಿ ವಿದ್ಯುತ್ ಖರೀದಿಸುತ್ತಿದೆ ಎಂದರು.

ಕೆಲವು ರಾಜ್ಯಗಳು ಕಡಿಮೆ ಬೆಲೆಗೆ ವಿದ್ಯುತ್ ಖರೀದಿ ಮಾಡಿದರೆ, ಇನ್ನು ಕೆಲವು ರಾಜ್ಯಗಳು ಹೆಚ್ಚಿನ ಬೆಲೆಗೆ ವಿದ್ಯುತ್ ಖರೀದಿ ಮಾಡುತ್ತಿವೆ. ಹೀಗಾಗಿ ಕೇಂದ್ರ ಸರ್ಕಾರ ಒಂದು ದೇಶ, ಒಂದು ವಿದ್ಯುತ್ ದರ ನೀತಿಯನ್ನು ಜಾರಿಗೆ ತರಬೇಕು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

"ಎಲ್ಲಾ ರಾಜ್ಯಗಳು ದೇಶದ ಒಟ್ಟಾರೆ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿವೆ. 'ಒಂದು ರಾಷ್ಟ್ರ, ಒಂದು ವಿದ್ಯುತ್ ದರ' ನೀತಿ ಜಾರಿಗೆ ತರಬೇಕು ಎಂದು ನಾನು ಈ ಹಿಂದೆ ಹಲವಾರು ಬಾರಿ ಹೇಳಿದ್ದೇನೆ. ಕೆಲವು ರಾಜ್ಯಗಳು ಉತ್ಪಾದನಾ ಘಟಕಗಳಿಂದ ಹೆಚ್ಚಿನ ದರದಲ್ಲಿ ಏಕೆ ವಿದ್ಯುತ್ ಖರೀದಿಸುತ್ತಿವೆ? ಕೇಂದ್ರ ಸರ್ಕಾರವೇ ದೇಶದಾದ್ಯಂತ ಏಕರೂಪದ ವಿದ್ಯುತ್ ದರ ಜಾರಿಗೆ ತರಬೇಕು" ಎಂದು ಬಿಹಾರ ಸಿಎಂ ಒತ್ತಾಯಿಸಿದ್ದಾರೆ.

SCROLL FOR NEXT