ದೇಶ

ವೈವಾಹಿಕ ವಿವಾದ ಪ್ರಕರಣಗಳಿಗಾಗಿ ಸುಪ್ರೀಂ ಕೋರ್ಟ್ ನಿಂದ ಮಹಿಳಾ ಪೀಠ ರಚನೆ

Nagaraja AB

ನವದೆಹಲಿ: ವೈವಾಹಿಕ ವಿವಾದ, ಜಾಮೀನು ವಿಚಾರ ಸೇರಿದಂತೆ ಮತ್ತಿತರ ಅರ್ಜಿಗಳ ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ. ವಿ. ನಾಗರತ್ನ ಸೇರಿದಂತೆ ಎಲ್ಲಾ ಮಹಿಳೆಯರನ್ನೊಳಗೊಂಡ ಪೀಠವೊಂದನ್ನು ಮುಖ್ಯ ನ್ಯಾಯಮೂರ್ತಿ ಡಿ. ವೈ.ಚಂದ್ರಚೂಡ್ ಇಂದು ರಚಿಸಿದ್ದಾರೆ.

ಈ ರೀತಿಯಾಗಿ ಸುಪ್ರೀಂ ಕೋರ್ಟ್ ಇತಿಹಾಸದಲ್ಲಿ ಮೂರನೇ ಬಾರಿಗೆ ಎಲ್ಲಾ ಮಹಿಳೆಯರನ್ನೊಳಗೊಂಡ ಪೀಠ ರಚಿಸಲಾಗಿದೆ. ವೈವಾಹಿಕ ವಿವಾದಕ್ಕೆ ಸಂಬಂಧಿಸಿದ 10 ವರ್ಗಾವಣೆ ಅರ್ಜಿಗಳು, 10 ಜಾಮೀನು ವಿಚಾರಗಳು ಸೇರಿದಂತೆ 32 ವಿಷಯಗಳ ವಿಚಾರಣೆ ಈ ಪೀಠದ ಮುಂಭಾಗದಲ್ಲಿದೆ.

ಜ್ಞಾನ್ ಸುಧಾ ಮಿಶ್ರಾ ಮತ್ತು ರಂಜನ್ ಪ್ರಕಾಶ್ ದೇಸಾಯಿ ಅವರನ್ನೊಳಗೊಂಡ ಮೊದಲ ಮಹಿಳಾ ನ್ಯಾಯಪೀಠವನ್ನು 2013ರಲ್ಲಿ ರಚಿಸಲಾಗಿತ್ತು. ತದನಂತರ 2018ರಲ್ಲಿ ನ್ಯಾಯಮೂರ್ತಿಗಳಾದ ಆರ್ ಬಾನುಮತಿ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ಮಹಿಳಾ ನ್ಯಾಯ ಪೀಠ ರಚನೆಯಾಗಿತ್ತು.

ಪ್ರಸ್ತುತ ರಚನೆಯಾಗಿರುವ ಮಹಿಳಾ ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ, ಬಿ.ವಿ. ನಾಗರತ್ನ ಮತ್ತು ತ್ರಿವೇದಿ ಅವರನ್ನೊಳಗೊಂಡ ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ನಾಗರತ್ನ 2027ಕ್ಕೆ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಸುಪ್ರೀಂಕೋರ್ಟ್ ನಲ್ಲಿ ಮುಖ್ಯ ನ್ಯಾಯಮೂರ್ತಿ ಸೇರಿದಂತೆ 27 ನ್ಯಾಯಮೂರ್ತಿಗಳಿದ್ದಾರೆ.

SCROLL FOR NEXT