ಪಿಂಕಿ ಇರಾನಿ 
ದೇಶ

ವಂಚಕ ಸುಕೇಶ್ ಚಂದ್ರಶೇಖರ್ ಆಪ್ತೆ ಪಿಂಕಿ ಇರಾನಿಗೆ ಡಿಸೆಂಬರ್ 21 ರವರೆಗೂ ನ್ಯಾಯಾಂಗ ಬಂಧನ

200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ವಂಚಕ ಸುಕೇಶ್ ಚಂದ್ರಶೇಖರ್ ಆಪ್ತೆ ಪಿಂಕಿ ಇರಾನಿಯನ್ನು ಡಿ.21ರವರೆಗೂ ದೆಹಲಿ ನ್ಯಾಯಾಲಯವೊಂದು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.  

ನವದೆಹಲಿ: 200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ವಂಚಕ ಸುಕೇಶ್ ಚಂದ್ರಶೇಖರ್ ಆಪ್ತೆ ಪಿಂಕಿ ಇರಾನಿಯನ್ನು ಡಿ.21ರವರೆಗೂ ದೆಹಲಿ ನ್ಯಾಯಾಲಯವೊಂದು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.  

ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಮುಂಬೈ ಮೂಲದ ಪಿಂಕಿ ಇರಾನಿ ಚಂದ್ರಶೇಖರ್ ನ ಆಪ್ತೆಯಾಗಿದ್ದು, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಆತನಿಗೆ ಪರಿಚಯಿಸಿದ್ದಳು ಎನ್ನಲಾಗಿದೆ.

ಆಕೆಯ ನ್ಯಾಯಾಂಗ ಬಂಧನ ಕೋರಿ ದೆಹಲಿ ಅಪರಾಧ ವಿಭಾಗದ ಪೊಲೀಸರು ಸಲ್ಲಿಸಿದ ವರದಿಯನ್ನು ಪರಿಗಣಿಸಿದ ನಂತರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೇಂದ್ರ ಮಲ್ಲಿಕ್ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 30 ರಂದು ಆರೋಪಿಯನ್ನು ಬಂಧಿಸಲಾಗಿದ್ದು, ಸೂಕ್ತ ರೀತಿಯಲ್ಲಿ ತನಿಖೆ ಅಲ್ಲದೇ,  ಮುಂದೆ ಯಾವುದೇ ರೀತಿಯ ಅಪರಾಧದಲ್ಲಿ ತೊಡಗಿಸಿಕೊಳ್ಳಲು ತಡೆಯಲು ಕಸ್ಟಡಿಯ ಆಗತ್ಯವಿದೆ ಎಂದು ನ್ಯಾಯಾಲಯ ಹೇಳಿತು.

ಪಾಟಿಯಾಲ ಹೌಸ್ ಕೋರ್ಟ್‌ನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ ನೀಡಿರುವ ಹೇಳಿಕೆ 'ಸಂಪೂರ್ಣ ಸುಳ್ಳು ಎಂದು ಪಿಂಕಿ ಇರಾನಿ ಶನಿವಾರ ಬಹಿರಂಗಪಡಿಸಿದರು. ಆರೋಪಿಯು ತನ್ನ ಎಲ್ಲಾ ಹೇಳಿಕೆಗಳನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದು ಅದನ್ನು ದಾಖಲೆಯಲ್ಲಿ ಇಡಬೇಕು ಎಂದು ನ್ಯಾಯಾಲಯ ಸೂಚಿಸಿತು.

ಕಂಪನಿಗಳು ಮತ್ತಿತರ ಕಡೆಗಳಿಂದ ಹಣ ಸುಲಿಗೆಗೆ ಪಿಂಕಿ ಇರಾನಿಯನ್ನು ಬಳಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.  ಕಳೆದ ವಾರ ನಟಿ ಜಾಕ್ವೆಲಿನ್ ಪರ್ನಾಂಡಿಸ್ ಅವರ ಹೇಳಿಕೆಯನ್ನು ದೆಹಲಿ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ದಾಖಲಿಸಿದ್ದರು. ಪಿಂಕಿಯನ್ನು ಸಹ ಈ ಹಿಂದೆಯೇ ಬಂಧಿಸಲಾಗಿತ್ತು. ಆದರೆ ಆಕೆ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಳು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT