ರಾಹುಲ್ ಗಾಂಧಿ 
ದೇಶ

ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆ: ರಾಹುಲ್ ಚಾಯ್ ಪೇ ಚರ್ಚಾ, ಮಾಜಿ ಸಂಸದ ರಘುವೀರ್ ಮೀನಾ ಅಸ್ವಸ್ಥ

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಬೆಳಗ್ಗೆ ಜಲವಾರ್ ಜಿಲ್ಲೆಯಿಂದ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದರು. ಮುಖ್ಯಮಂತ್ರಿ  ಅಶೋಕ್ ಗೆಹ್ಲೋಟ್, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿದರು.

ಜಲವಾರ್: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಬೆಳಗ್ಗೆ ಜಲವಾರ್ ಜಿಲ್ಲೆಯಿಂದ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದರು. ಮುಖ್ಯಮಂತ್ರಿ  ಅಶೋಕ್ ಗೆಹ್ಲೋಟ್, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿದರು.

ರಾಹುಲ್ ಗಾಂಧಿ ಅವರ 89ನೇ ದಿನದ ಯಾತ್ರೆಯೂ ರಾಜಸ್ಥಾನ- ಮಧ್ಯ ಪ್ರದೇಶ ಗಡಿ ಪ್ರದೇಶ ಝಲ್ರಾಪಟನ್‌ನಲ್ಲಿ ಕಾಳಿ ತಲೈನಿಂದ ಶುರುವಾಯಿತು. 13 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ಕೊರೆಯುವ ಚಳಿಯಲ್ಲೂ ಟಿ- ಶರ್ಟ್ ಮತ್ತು ಶೂ ನೊಂದಿಗೆ ರಾಹುಲ್ ಗಾಂಧಿ ಬೆಳಗ್ಗೆ 6-10ಕ್ಕೆ ಯಾತ್ರೆಯನ್ನು ಆರಂಭಿಸಿದರೆ, ಪಕ್ಷದ ಇತರ ಮುಖಂಡರು ಜಾಕೆಟ್ ಧರಿಸಿದ್ದರು. 

ಯಾತ್ರೆ ವೇಳೆಯಲ್ಲಿ ರಾಹುಲ್ ಗಾಂಧಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಅಪಾರ ಸಂಖ್ಯೆಯಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ಯಾತ್ರೆ ಸೂಕ್ತವಾಗಿದೆ ಎಂದು ಕರೆದರು. ನಂತರ ಡಾಬಾವೊಂದರಲ್ಲಿ ರಾಹುಲ್  ಚಹಾ ಸೇವಿಸಿದರು. ಈ ವೇಳೆ ಮಾಜಿ ಸಂಸದ ರಘುವೀರ್ ಮೀನಾ ಅವರು ಅಸ್ವಸ್ಥಗೊಂಡಿದ್ದು, ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಜಲವಾರದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸುಮಾರು 14 ಕಿ.ಮೀ ಕ್ರಮಿಸಿದ ನಂತರ ಪಾದಯಾತ್ರೆ ಬಲಿಬೋರ್ಡಾ ಚೌರಾದಲ್ಲಿ ಸ್ಥಗಿತಗೊಂಡಿತು. 

ಮಧ್ಯಾಹ್ನ 3.30ಕ್ಕೆ ಭೋಜನ ನಂತರ ನಹರ್ಡಿ ಪ್ರದೇಶದಿಂದ ಯಾತ್ರೆ ಪುನರ್ ಆರಂಭವಾಗಲಿದೆ. ಯಾತ್ರೆಯನ್ನು ನಿಧಾನಗೊಳಿಸಬೇಡಿ, ಅದ್ಬುತವಾಗುವಂತೆ ಮಾಡಿ ಎಂದು ಕಾಂಗ್ರೆಸ್ ಪಕ್ಷ ತನ್ನ ಸದಸ್ಯರಲ್ಲಿ ಮನವಿ ಮಾಡಿದೆ. 
ಭಾರತ್ ಜೋಡೋ ಯಾತ್ರೆಯು ಐತಿಹಾಸಿಕ ನಾಡು ರಾಜಸ್ಥಾನ ಮತ್ತೊಂದು ಇತಿಹಾಸ ಸೃಷ್ಟಿಸಲಿದೆ ಎಂದು ಪಕ್ಷ ಟ್ವೀಟ್ ಮಾಡಿದೆ. 

ಡಿಸೆಂಬರ್ 21 ರಂದು ಹರಿಯಾಣ ಪ್ರವೇಶಿಸುವ ಮೊದಲು 17 ದಿನಗಳ ಕಾಲ ಯಾತ್ರೆಯು ಜಲಾವರ್, ಕೋಟಾ, ಬುಂಡಿ, ಸವಾಯಿ ಮಾಧೋಪುರ್, ದೌಸಾ ಮತ್ತು ಅಲ್ವಾರ್ ಜಿಲ್ಲೆಗಳ ಮೂಲಕ ಸುಮಾರು 500 ಕಿಲೋಮೀಟರ್‌ ದೂರ ಕ್ರಮಿಸಲಿದೆ. ಈ ಸಂದರ್ಭದಲ್ಲಿ  ರಾಹುಲ್ ಗಾಂಧಿ  ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಡಿಸೆಂಬರ್ 15 ರಂದು ದೌಸಾದಲ್ಲಿ ಲಾಲ್ಸೋಟ್ ಮತ್ತು ಡಿಸೆಂಬರ್ 19 ರಂದು ಅಲ್ವಾರ್‌ನ ಮಳಖೇಡಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಾನವಸಹಿತ ಗಗನಯಾನ: ಇಸ್ರೋದಿಂದ ಡ್ರೋಗ್ ಪ್ಯಾರಾಚೂಟ್‌ ಅರ್ಹತಾ ಪರೀಕ್ಷೆ ಯಶಸ್ವಿ

ಬೆಂಗಳೂರು: ಅನಧಿಕೃತ ಮನೆಗಳ ಮೇಲೆ JCB ನುಗ್ಗಿಸಿದ GBA; 200ಕ್ಕೂ ಹೆಚ್ಚು ಮನೆಗಳು ನೆಲಸಮ!

ಬಿಹಾರದ ಫಲಿತಾಂಶ ಬಂಗಾಳದಲ್ಲಿ ಬಿಜೆಪಿ ಗೆಲುವಿಗೆ 'ರಹದಾರಿ': ಪ್ರಧಾನಿ ಮೋದಿ ಮಾತಿನ ಮರ್ಮವೇನು?

ಟಿ20 ವಿಶ್ವಕಪ್ 2026 ನಿಂದ ಶುಭ್ಮನ್ ಗಿಲ್ ಕೈಬಿಟ್ಟಿದ್ದೇಕೆ?: ಅಜಿತ್ ಅಗರ್ಕರ್ ಕೊಟ್ರು ಕಾರಣ

ತೆಲಂಗಾಣ: ಬಿಜೆಪಿ ಸೇರಿದ ಜನಪ್ರಿಯ ತೆಲುಗು ನಟಿ ಆಮಾನಿ

SCROLL FOR NEXT