ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ರಾಜಸ್ಥಾನ: ಭಾರತ್ ಜೋಡೋ ಯಾತ್ರೆ, ಬಿಜೆಪಿ ಕಚೇರಿ ಬಳಿಯಿದ್ದ ಜನರಿಗೆ ಫ್ಲೈಯಿಂಗ್ ಕಿಸ್‌ ನೀಡಿದ ರಾಹುಲ್!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಹಲವು ರೀತಿಯಲ್ಲಿ ಗಮನ ಸೆಳೆಯುತ್ತಿದೆ. ಇಂದು ಬೆಳಗ್ಗೆ ಜಲವಾರ್ ನಲ್ಲಿರುವ ಬಿಜೆಪಿ ಕಚೇರಿ ಬಳಿಯಿದ್ದ ಜನರಿಗೆ ಫ್ಲೈಯಿಂಗ್ ಕಿಸ್‌ ನೀಡುವ ಮೂಲಕ ನೆರೆದಿದ್ದ ಜನರಿಗೆ ಅಚ್ಚರಿಯನ್ನುಂಟು ಮಾಡಿದರು.

ರಾಹುಲ್ ಗಾಂಧಿ
Nagaraja AB
Updated On : 6 Dec 2022, 12:18 pm

ಜಲವಾರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಹಲವು ರೀತಿಯಲ್ಲಿ ಗಮನ ಸೆಳೆಯುತ್ತಿದೆ. ಇಂದು ಬೆಳಗ್ಗೆ ಜಲವಾರ್ ನಲ್ಲಿರುವ ಬಿಜೆಪಿ ಕಚೇರಿ ಬಳಿಯಿದ್ದ ಜನರಿಗೆ ಫ್ಲೈಯಿಂಗ್ ಕಿಸ್‌ ನೀಡುವ ಮೂಲಕ ನೆರೆದಿದ್ದ ಜನರಿಗೆ ಅಚ್ಚರಿಯನ್ನುಂಟು ಮಾಡಿದರು.

ಬಿಜೆಪಿ ಮತ್ತು ಆರ್ ಎಸ್ ಎಸ್ ನವರು ಏಕೆ ಜೈ ಶ್ರೀರಾಮ್, ಹೇ ರಾಮ್  ಎಂದು ಪಠಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ ಬೆನ್ನಲ್ಲೇ ರಾಹುಲ್ ಗಾಂಧಿ ಈ ರೀತಿಯಲ್ಲಿ ಗಮನ ಸೆಳೆದರು. ಖೇಲ್ ಸಂಕಲ್ ನಲ್ಲಿ ಸೋಮವಾರ ರಾತ್ರಿ ಸ್ಥಗತಗೊಂಡಿದ್ದ ಯಾತ್ರೆ ಇಂದು ಬೆಳಗ್ಗೆ ಜಲವಾರ್ ನಗರವನ್ನು ದಾಟಿತು.  

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಾಸ್ರಾ, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಹಲವಾರು ಸಚಿವರು ಮತ್ತು ಶಾಸಕರು ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದರು. ಸರಿ ಸುಮಾರು 12 ಕಿ.ಮೀ ಕ್ರಮಿಸಿದ ನಂತರ ಯಾತ್ರೆಯು ಬೆಳಿಗ್ಗೆ 10 ಗಂಟೆಗೆ ದೇವರಘಟ್ಟ ತಲುಪಿತು.

Advertisement

Advertisement

ಭೋಜನ ವಿರಾಮದ ನಂತರ  ಸುಕೇತ್‌ನಿಂದ ಮಧ್ಯಾಹ್ನ 3.30 ಕ್ಕೆ ಪುನರಾರಂಭವಾಗುತ್ತದೆ. ಜಲಾವರ್‌ನ ಮೋರು ಕಲಾನ್ ಖೇಲ್ ಮೈದಾನದಲ್ಲಿ ರಾತ್ರಿ ತಂಗಲು ಯೋಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments