ದೇಶ

ಪೋಷಕರೊಂದಿಗೆ ಸಮಯ ಕಳೆಯಲು ಸರ್ಕಾರಿ ನೌಕರರಿಗೆ ವಿಶೇಷ ಸಿಎಲ್ ಅನುಮೋದಿಸಿದ ಅಸ್ಸಾಂ ಸರ್ಕಾರ

Srinivas Rao BV

ಅಸ್ಸಾಂ: ಸತತ 2ನೇ ವರ್ಷ ಅಸ್ಸಾಂ ಸರ್ಕಾರ ತನ್ನ ನೌಕರರಿಗೆ ಪೋಷಕರೊಂದಿಗೆ ಸಮಯ ಕಳೆಯುವುದಕ್ಕಾಗಿ ವಿಶೇಷ ಸಿಎಲ್ ನ್ನು ಅನುಮೋದಿಸಿದೆ. 

ಮುಂದಿನ ವರ್ಷ ಫೆ.09 ಹಾಗೂ 10 ರಂದು ಉದ್ಯೋಗಿಗಳು ವಿಶೇಷ ರಜೆಯನ್ನು ಪಡೆಯಬಹುದಾಗಿದೆ.
 
ವಿಶೇಷ ರಜೆಗಳನ್ನು ನಿಯಮಿತ ರಜಾದಿನಗಳಾದ ಎರಡನೇ ಶನಿವಾರ ಮತ್ತು ಭಾನುವಾರಗಳ ಜೊತೆಗೆ ಬರುವಂತೆ ನೋಡಿಕೊಳ್ಳಲಾಗುತ್ತದೆ. ಇದರಿಂದಾಗಿ ಉದ್ಯೋಗಿಗಳಿಗೆ ತಮ್ಮ ಪೋಷಕರೊಂದಿಗೆ ಸಮಯ ಕಳೆಯುವುದಕ್ಕೆ ನಾಲ್ಕು ದಿನಗಳು ಲಭ್ಯವಾಗಲಿದೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಿದೆ.
 
ರಜೆ ಸೌಲಭ್ಯಗಳ ವಿವರಗಳನ್ನು ವಿಶೇಷ ವೆಬ್ ಪೋರ್ಟಲ್ ಮೂಲಕ ತಿಳಿಸಲಾಗುತ್ತದೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. 2021 ರ ಸ್ವಾತಂತ್ರ್ಯ ದಿನದಂದು ಸಿಎಂ ಹಿಮಂತ ಬಿಸ್ವ ಶರ್ಮ ವಿಶೇಷ ರಜೆ ಸೌಲಭ್ಯವನ್ನು ಘೋಷಿಸಿದ್ದರು.

ಈ ರೀತಿಯ ಮೊದಲ ರಜೆಯನ್ನು ಈ ವರ್ಷ ಜ.06 ಹಾಗೂ 07 ರಂದು ನೀಡಲಾಗಿತ್ತು. ಸಿಎಂ, ಮುಖ್ಯಕಾರ್ಯದರ್ಶಿ, ಡಿಜಿಪಿ ಹೊರತುಪಡಿಸಿದರೆ, ಸಚಿವರು ಸೇರಿದಂತೆ ಎಲ್ಲಾ ಸರ್ಕಾರಿ ನೌಕರರೂ ಈ ರೀತಿಯ ಸೌಲಭ್ಯವನ್ನು ಪಡೆಯಬಹುದಾಗಿದೆ.

SCROLL FOR NEXT