ದೇಶ

ಲೋಕಸಭೆ ಕಲಾಪ: ನೋಟು ಅಮಾನ್ಯೀಕರಣದ ಬಗ್ಗೆ ಶ್ವೇತ ಪತ್ರಕ್ಕೆ ಕಾಂಗ್ರೆಸ್ ಆಗ್ರಹ 

Srinivas Rao BV

ನವದೆಹಲಿ: ಲೋಕಸಭೆಯ ಕಲಾಪದಲ್ಲಿ ಇಂದು ನೋಟು ಅಮಾನ್ಯೀಕರಣದ ಬಗ್ಗೆ ಕಾಂಗ್ರೆಸ್ ಪ್ರಸ್ತಾಪಿಸಿದ್ದು, ಶ್ವೇತ ಪತ್ರ ಹೊರಡಿಸುವಂತೆ ಆಗ್ರಹಿಸಿದೆ.
 
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ, ನೋಟು ಅಮಾನ್ಯೀಕರಣ ಕೇಂದ್ರ ಸರ್ಕಾರದ ವೈಫಲ್ಯವಾಗಿದೆ ಎಂದು ಆರೋಪಿಸಿದ್ದಾರೆ.
 
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಚೌಧರಿ, ಕೇಂದ್ರ ಸರ್ಕಾರ ಯೋಚನೆ ಮಾಡದೇ ನಿರ್ಧಾರ ತೆಗೆದುಕೊಂಡಿತ್ತು, ಆ ನಿರ್ಧಾರವೇ ಅತಾರ್ಕಿಕವಾಗಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೋಟ್ ಬ್ಯಾನ್ ಆರ್ಥಿಕ ನೀತಿಯ ವಿಷಯವಿರಬಹುದು, ಆದರೆ ನಿರ್ಧಾರದ ರೀತಿಯನ್ನು ಪರಿಶೀಲಿಸಬಹುದು: ಸುಪ್ರೀಂ
 
ಕರೆನ್ಸಿ ನೋಟುಗಳ ಪರಿಚಲನೆಯಲ್ಲಿ ಶೇ.72 ರಷ್ಟು ಏರಿಕೆಯಾಗಿದೆ, ಕಪ್ಪು ಹಣ ಚಲಾವಣೆ ನಿಂತಿಲ್ಲ ಎಂದೂ ಆಧೀರ್ ರಂಜನ್ ಚೌಧರಿ ಹೇಳಿದ್ದಾರೆ.

ಅಧೀರ್ ರಂಜನ್ ಚೌಧರಿ ಮಾತನಾಡುತ್ತಿದ್ದಾಗ, ಮಧ್ಯಪ್ರವೇಶಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಕಾಂಗ್ರೆಸ್ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಹಾಗೂ ಅಕ್ರಮ ವಲಸಿಗರನ್ನು ಬೆಂಬಲಿಸುತ್ತಿದೆ, ಆದ್ದರಿಂದ ಕಾಂಗ್ರೆಸ್ ನೋಟು ಅಮಾನ್ಯೀಕರಣ ನಿರ್ಧಾರವನ್ನು ವಿರೋಧಿಸುತ್ತಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

SCROLL FOR NEXT