ಉತ್ತರ ಪ್ರದೇಶದ ಪೊಲೀಸ್ ಪೇದೆ ಮನೋಜ್ ಕುಮಾರ್ 
ದೇಶ

'ಈ ರೊಟ್ಟಿನ ನಾಯಿ ಸಹ ತಿನ್ನಲ್ಲ' ಎಂದಿದ್ದ ಪೊಲೀಸ್ ಪೇದೆಯ 600 ಕಿಮೀ ದೂರದ ವರ್ಗಾವಣೆಗೆ ಅಲಹಾಬಾದ್ ಹೈಕೋರ್ಟ್ ತಡೆ

ಫಿರೋಜಾಬಾದ್ ಪೊಲೀಸ್ ಲೈನ್‌ನ ಮೆಸ್‌ನಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದ ಉತ್ತರ ಪ್ರದೇಶದ ಪೊಲೀಸ್ ಪೇದೆ ಮನೋಜ್ ಕುಮಾರ್ ಅವರ ವರ್ಗಾವಣೆಗೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ.

ಪ್ರಯಾಗ್‌ರಾಜ್: ಫಿರೋಜಾಬಾದ್ ಪೊಲೀಸ್ ಲೈನ್‌ನ ಮೆಸ್‌ನಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದ ಉತ್ತರ ಪ್ರದೇಶದ ಪೊಲೀಸ್ ಪೇದೆ ಮನೋಜ್ ಕುಮಾರ್ ಅವರ ವರ್ಗಾವಣೆಗೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ.

ಫಿರೋಜಾಬಾದ್‌ನಿಂದ ಗಾಜಿಪುರಕ್ಕೆ ವರ್ಗಾವಣೆಗೊಂಡ ಮನೋಜ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಮೂರ್ತಿ ಪಂಕಜ್ ಭಾಟಿಯಾ ಅವರು ಈ ಆದೇಶ ನೀಡಿದ್ದಾರೆ.

2022ರ ಸೆಪ್ಟೆಂಬರ್ 20 ರ ವರ್ಗಾವಣೆ ಆದೇಶವು ಆಡಳಿತಾತ್ಮಕ ಆಧಾರದ ಮೇಲೆ ಮಾಡಲಾಗಿದೆ ಎಂದು ಹೇಳಿದ್ದರೂ, ಪೊಲೀಸ್ ಮೆಸ್‌ನಲ್ಲಿ ನೀಡಲಾಗುತ್ತಿರುವ ಕಳಪೆ ಆಹಾರದ ವಿರುದ್ಧ ಪ್ರತಿಭಟಿಸಿದ್ದರಿಂದ ಮನೋಜ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ಅರ್ಜಿದಾರರ ವಾದವನ್ನು ಆಲಿಸಿದ ನ್ಯಾಯಾಲಯ, ಈ ವಿಚಾರವನ್ನು ಪರಿಗಣಿಸುವ ಅಗತ್ಯವಿದೆ. ಪ್ರತಿವಾದಿಗಳು ನಾಲ್ಕು ವಾರಗಳಲ್ಲಿ ಅಫಿಡವಿಟ್ ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿದಾರರು ಮರುಪ್ರಮಾಣ ಪತ್ರ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಬೇಕು ಎಂದಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 28ಕ್ಕೆ ಮುಂದೂಡಿದೆ.

ವಿಚಾರಣೆಯ ಮುಂದಿನ ದಿನಾಂಕದವರೆಗೆ, ಅರ್ಜಿದಾರರು ಈಗಾಗಲೇ ಹೊಸ ಸ್ಥಳದಲ್ಲಿ ಸೇವೆಗೆ ಹಾಜರಾಗದ ಹೊರತು ಸೆಪ್ಟೆಂಬರ್ 20 ರ ವರ್ಗಾವಣೆ ಆದೇಶವನ್ನು ಜಾರಿಗೆ ತರಲಾಗುವುದಿಲ್ಲ ಎಂದು ಅದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟಿ-20 ವಿಶ್ವಕಪ್ 2026: ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸದಿರಲು ICC ಮುಂದೆ ಮೂರು ಬೇಡಿಕೆ ಮುಂದಿಟ್ಟ ಪಾಕಿಸ್ತಾನ!

'ಬಯಸಿದರೆ ಮೋದಿ ರಾಜಕೀಯ ಜೀವನ ನಾಶಗೊಳಿಸಬಲ್ಲೆ': ಟ್ರಂಪ್ ಹೇಳಿಕೆ ವೀಡಿಯೋ ಮತ್ತೆ ವೈರಲ್, ಚರ್ಚೆ ಶುರು

ಕಳಸಾ-ಬಂಡೂರಿ, ಮೇಕೆದಾಟು ಯೋಜನೆ ವಿಳಂಬಕ್ಕೆ ಕೇಂದ್ರ ಸರ್ಕಾರವೇ ಕಾರಣ: ಸಿಎಂ ಸಿದ್ದರಾಮಯ್ಯ

ಸಾವಿನ ಭಯದಿಂದ 'ಮುಕ್ತಿ'- ದೀರ್ಘಾಯುಷ್ಯಕ್ಕಾಗಿ ಭಗವಾನ್ ಶಿವನಿಗೆ ಪ್ರಿಯವಾದ ಈ ಪವರ್ ಫುಲ್ 'ಮಂತ್ರ' ಜಪಿಸಿ!

ಬಳ್ಳಾರಿ: ತೆಕ್ಕಲಕೋಟೆ ಉತ್ಖನನದಲ್ಲಿ ಮಾನವ ಅಸ್ಥಿಪಂಜರ ಪತ್ತೆ, 3,000-5,000 ವರ್ಷ ಹಳೆಯದೆಂದು ತಜ್ಞರ ಅಂದಾಜು

SCROLL FOR NEXT