ದೇಶ

ಇಂಕ್ ದಾಳಿ: ಕ್ಷಮೆಯಾಚಿಸಿದ ಮಹಾರಾಷ್ಟ್ರ ಸಚಿವ; ಬಂಧಿತರ ಬಿಡುಗಡೆ; ದೂರು ಹಿಂಪಡೆಯುವಂತೆ ಮನವಿ

Srinivasamurthy VN

ಪುಣೆ: ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಫುಲೆ ಅವರ ಕುರಿತ ಹೇಳಿಕೆ ನೀಡಿದ ಮಹಾರಾಷ್ಟ್ರದ ಸಚಿವ ಮತ್ತು ಹಿರಿಯ ಭಾರತೀಯ ಜನತಾ ಪಕ್ಷದ ನಾಯಕ ಚಂದ್ರಕಾಂತ್ ಪಾಟೀಲ್ ಅವರು ಸೋಮವಾರ ಕ್ಷಮೆಯಾಚಿಸಿದ್ದು, ಈ ಪ್ರಕರಣದಲ್ಲಿ ಬಂಧಿತರಾಗಿರುವ ಬಂಧಿತರಾದವರನ್ನು ಬಿಡುಗಡೆ ಮಾಡುವಂತೆ ಕೋರಿದ್ದಾರೆ.

ಅಂಬೇಡ್ಕರ್ ಮತ್ತು ಫುಲೆ ಅವರು ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಸರ್ಕಾರದ ಅನುದಾನವನ್ನು ಕೇಳಲಿಲ್ಲ ಎಂಬ ಪಾಟೀಲ್ ಅವರ ಹೇಳಿಕೆಯನ್ನು ವಿರೋಧಿಸಿ ಶನಿವಾರ ಇಲ್ಲಿನ ಪಿಂಪ್ರಿ ಚಿಚ್ವಾಡ್‌ನಲ್ಲಿ ಪ್ರತಿಭಟನಾಕಾರರು ಇಂಕ್ ದಾಳಿ ನಡೆಸಿದ್ದರು. ರಾಜ್ಯದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವರಾಗಿರುವ ಪಾಟೀಲ್ ಅವರು ಭಿಕ್ಷೆ ಬೇಡಿದ್ದು ಎಂಬ ಪದ ಬಳಕೆ ವಿವಾದಕ್ಕೆ ಕಾರಣವಾಗಿದ್ದು, ಇದೇ ಕಾರಣಕ್ಕೆ ಇಂಕ್ ದಾಳಿ ನಡೆಸಲಾಯಿತು ಎಂದು ಹೇಳಲಾಗಿದೆ. 

ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದು, ಪ್ರಕರಣದಲ್ಲಿ ಟಿವಿ ಟೆಲಿವಿಷನ್ ಪತ್ರಕರ್ತರೊಬ್ಬರು ಇದರಲ್ಲಿ ಭಾಗಿಯಾಗಿದ್ದಾರೆಯೇ ಎಂದು ಕಂಡುಹಿಡಿಯಲು ವಿಚಾರಣೆ ನಡೆಸುತ್ತಿದ್ದಾರೆ. 

ಇನ್ನು ವಿವಾದ ಸಂಬಂಧ ಮಾತನಾಡಿರುವ ಪಾಟೀಲ್, 'ಛತ್ರಪತಿ ಶಿವಾಜಿ ಮಹಾರಾಜ್, ಮಹಾತ್ಮ ಜೋತಿಬಾ ಫುಲೆ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಕರ್ಮವೀರ್ ಭೌರಾವ್ ಪಾಟೀಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ ಮತ್ತು ಅವರ ಬೋಧನೆಗಳನ್ನು ಕಾರ್ಯರೂಪದಲ್ಲಿ ಅನುಸರಿಸುತ್ತಿದ್ದೇನೆ. ಅವರ ಮಹಾನ್ ಕಾರ್ಯದ ಬಗ್ಗೆ ನನಗೆ ಅಪಾರ ಗೌರವವಿದೆ, ನಾನು ಆ ಪದವನ್ನು ನನ್ನ ಆಡುಭಾಷೆಯಲ್ಲಿ ಅಚಾತುರ್ಯದಿಂದ ಉಚ್ಚರಿಸಿದ್ದೇನೆಯೇ ಹೊರತು ಯಾರನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ ಮತ್ತು ಆ ಪದಕ್ಕಾಗಿ ನಾನು ಈಗಾಗಲೇ ಕ್ಷಮೆಯಾಚಿಸಿದ್ದೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೇಳಿಕೆ ಬಳಿಕದ ನಂತರ ನಡೆದ ಘಟನೆಗಳು ನೋವಿನಿಂದ ಕೂಡಿದೆ ಎಂದ ಅವರು, ಛತ್ರಪತಿ ಶಿವಾಜಿ ಮಹಾರಾಜರ "ಮಾವಲ" (ಸೈನಿಕ) ವ್ಯಕ್ತಿಯ ವಿರುದ್ಧ ಇಂತಹ ಆರೋಪಗಳನ್ನು ಮಾಡುತ್ತಿರುವುದು ವಿಷಾದಕರವಾಗಿದೆ. ಈ ವಿಚಾರದಲ್ಲಿ ಮಹಾರಾಷ್ಟ್ರಕ್ಕೆ ತೊಂದರೆಯಾಗುವುದು ನನಗೆ ಇಷ್ಟವಿಲ್ಲ. ಯಾರ  ಭಾವನೆಗಳಿಗೆ ಧಕ್ಕೆ ತಂದಿದ್ದರೆ ಮತ್ತೊಮ್ಮೆ  ಕ್ಷಮೆಯಾಚಿಸುತ್ತೇನೆ. ಯಾರ ವಿರುದ್ಧವೂ ತನಗೆ ಯಾವುದೇ ದೂರುಗಳಿಲ್ಲ.. ಪ್ರಕರಣದಲ್ಲಿ ಬಂಧಿತರನ್ನು ಬಿಡುಗಡೆ ಮಾಡಬೇಕು ಮತ್ತು ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧದ ಅಮಾನತು ಕ್ರಮವನ್ನು ಹಿಂಪಡೆಯಬೇಕು. ನನ್ನ ಮುಖಕ್ಕೆ ಮಸಿ ಎರಚಿದವರ ಬಗ್ಗೆ ನಾನೇನೂ ಹೇಳಲು ಬಯಸುವುದಿಲ್ಲ, ನನ್ನ ಕಡೆಯಿಂದ ಈ ವಿಚಾರಕ್ಕೆ ಅಂತ್ಯ ಹಾಡುತ್ತಿದ್ದು, ಚರ್ಚೆ ನಿಲ್ಲಿಸುವಂತೆ ಮನವಿ ಮಾಡುತ್ತಿದ್ದೇನೆ ಎಂದು ಪಾಟೀಲ್ ಹೇಳಿದರು.

ಇಂಕ್ ದಾಳಿಗೆ ಕಾರಣವಾದ ಕರ್ತವ್ಯ ಲೋಪಕ್ಕಾಗಿ ತಮ್ಮ 10 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ಭಾನುವಾರ ಹೇಳಿದ್ದರು.
 

SCROLL FOR NEXT