ರಾಜನಾಥ್ ಸಿಂಗ್ 
ದೇಶ

ಭಾರತ-ಚೀನಾ ಸಂಘರ್ಷ: ತುರ್ತು ಸಭೆ ಕರೆದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾಪಡೆ ಹಾಗೂ ರಕ್ಷಣಾ ಪಡೆ ಮುಖ್ಯಸ್ಥರು ಭಾಗಿ

ಅರುಣಾಚಲ ಪ್ರದೇಶದ ತವಾಂಗ್ ವಲಯದಲ್ಲಿ ಮೊನ್ನೆ ಡಿಸೆಂಬರ್ 9ರಂದು ಭಾರತ-ಚೀನಾ ಸೈನಿಕರ ಮಧ್ಯೆ ಏರ್ಪಟ್ಟ ಮುಖಾಮುಖಿ ಸಂಘರ್ಷದಲ್ಲಿ ಎರಡೂ ಕಡೆಯ ಹಲವು ಯೋಧರಿಗೆ ಗಾಯವಾಗಿದೆ. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಸಂಸತ್ತು ಕಲಾಪದಲ್ಲಿ ಒತ್ತಾಯಿಸಿದೆ.

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ವಲಯದಲ್ಲಿ ಮೊನ್ನೆ ಡಿಸೆಂಬರ್ 9ರಂದು ಭಾರತ-ಚೀನಾ ಸೈನಿಕರ ಮಧ್ಯೆ ಏರ್ಪಟ್ಟ ಮುಖಾಮುಖಿ ಸಂಘರ್ಷದಲ್ಲಿ ಎರಡೂ ಕಡೆಯ ಹಲವು ಯೋಧರಿಗೆ ಗಾಯವಾಗಿದೆ. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಸಂಸತ್ತು ಕಲಾಪದಲ್ಲಿ ಒತ್ತಾಯಿಸಿದೆ.

ಕಾಂಗ್ರೆಸ್ ನಾಯಕರು ಉಭಯ ಸದನಗಳಲ್ಲಿ ನಿಲುವಳಿ ಸೂಚನೆ ಮಂಡಿಸಿದ್ದಾರೆ. ಈ ಬೆಳವಣಿಗೆಗಳ ಕುರಿತು ಇಂದು ಸಂಸತ್ತು ಕಲಾಪದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡುವ ಸಾಧ್ಯತೆಯಿದೆ. ಅಲ್ಲದೆ ಮುಂದೆ ಏನು ಕ್ರಮ ಕೈಗೊಳ್ಳಬೇಕೆಂದು ಚರ್ಚಿಸಲು ಭಾರತೀಯ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರ ಜೊತೆ ಇಂದು ರಕ್ಷಣಾ ಸಚಿವರು ಸಭೆ ನಡೆಸಲಿದ್ದಾರೆ. ದೆಹಲಿಯ ತಮ್ಮ ನಿವಾಸದಲ್ಲಿ ಇಂದು ತುರ್ತು ಸಭೆ ಕರೆದಿದ್ದಾರೆ. 

ಭೂಸೇನೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ವಾಯುಪಡೆ ಮುಖ್ಯಸ್ಥ ಮಾರ್ಷಲ್ ವಿಆರ್ ಚೌಧರಿ ಅವರ ಜೊತೆ ಇಂದು ರಾಜನಾಥ್ ಸಿಂಗ್ ಸಭೆ ನಡೆಸಿ ಚರ್ಚೆ ಮಾಡಲಿದ್ದಾರೆ. 

ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ), ವಿದೇಶಾಂಗ ಕಾರ್ಯದರ್ಶಿಗಳಾದ ವಿನಯ್ ಕ್ವಾತ್ರಾ ಮತ್ತು ಗಿರಿಧರ್ ಅರಮನೆ ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತೀಯ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಚೀನಾದ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಇರುವ ಭದ್ರತಾ ಪರಿಸ್ಥಿತಿಯ ಕುರಿತು ವಿವರಿಸಲಿದ್ದಾರೆ. ತವಾಂಗ್‌ನಲ್ಲಿ ಎರಡೂ ಕಡೆಯ ಸೈನಿಕರ ನಡುವಿನ ಘರ್ಷಣೆಯ ಕುರಿತು ಭದ್ರತಾ ಪಡೆಗಳು ಅವರಿಗೆ ಮಾಹಿತಿ ನೀಡಿವೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕದ ಜೊತೆ ನೇರ ಮಾತುಕತೆ ಇಲ್ಲ: ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಸ್ಪಷ್ಟನೆ

ಬಾರಾಮತಿಯಲ್ಲಿ ಮತ್ತೆ ತರಬೇತಿ ವಿಮಾನ ಪತನ; ಅಜಿತ್ ಪವಾರ್ ದುರಂತದ ಬಳಿಕ 2ನೇ ಘಟನೆ

ಸೆಲ್ಫಿ ಕೇಳಿ ಬಂದ ಮಹಿಳಾ ಅಭಿಯಾನಿಯಿಂದ 'ಲಿಪ್ ಲಾಕ್': ತಬ್ಬಿಬ್ಬಾದ ಬಾಲಿವುಡ್ ನಟಿ ನಿಕಿತಾ ರಾವಲ್, Video ವೈರಲ್

ಇರಾನ್ ಯುದ್ಧದ ಎಫೆಕ್ಟ್: ಅಮೆರಿಕದ ಶಸ್ತ್ರಾಸ್ತ್ರ ದಾಸ್ತಾನು ಖಾಲಿ? ರಕ್ಷಣಾ ಕಂಪನಿಗಳಿಗೆ ಶಸ್ತ್ರಾಸ್ತ್ರ ಉತ್ಪಾದನೆ ಹೆಚ್ಚಿಸಲು ಪೆಂಟಗನ್ ಸೂಚನೆ

ಕೋಮಾ ಸ್ಥಿತಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ? ವದಂತಿ ಬೆನ್ನಲ್ಲೇ ದಿಢೀರ್ Video ಬಿಡುಗಡೆ ಮಾಡಿದ ಇರಾನ್; ಸತ್ಯ ಮುಚ್ಚಿಡುವ ಯತ್ನವೇ..?