ದೇಶ

ವಿಮಾನ ನಿಲ್ದಾಣಗಳಲ್ಲಿ ದಟ್ಟಣೆ ನಿರ್ವಹಣೆಗೆ ಸಿಐಎಸ್ಎಫ್ ನಿಂದ ಹೆಚ್ಚುವರಿ 100 ಸಿಬ್ಬಂದಿ ನಿಯೋಜನೆ

Srinivas Rao BV

ನವದೆಹಲಿ: ದೆಹಲಿ, ಮುಂಬೈ ಸೇರಿದಂತೆ ದೇಶದ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ದಟ್ಟಣೆಯನ್ನು ನಿವಾರಿಸುವುದಕ್ಕಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ( ಸಿಐಎಸ್ಎಫ್) ಸಜ್ಜುಗೊಂಡಿದೆ.

ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಹೆಚ್ಚುವರಿ ಭದ್ರತಾ ಕೌಂಟರ್ ಗಳು ಪ್ರಾರಂಭವಾಗಲಿದ್ದು, ಸಿಐಎಸ್ಎಫ್ 100 ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಿದೆ.
 
ಕೇಂದ್ರ ಅರೆಸೇನಾಪಡೆಯನ್ನು ರಾಷ್ಟ್ರೀಯ ವಾಯುಯಾನ ಭದ್ರತಾ ಪಡೆ ಎಂದು ಗುರುತಿಸಲಾಗಿದ್ದು, ಭದ್ರತಾ ಶಿಷ್ಟಾಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ತಾನು ಇನ್ನಷ್ಟು ಸಿಬ್ಬಂದಿಗಳನ್ನು ನಿಯೋಜಿಸಬಹುದಾಗಿದೆ ಎಂದು ವಿಮಾನ ನಿಲ್ದಾಣ ನಿರ್ವಾಹಕರು, ವಿಮಾನಯಾನ ಸಂಸ್ಥೆಗಳು ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಮಾಹಿತಿ ನೀಡಿದೆ.

"ಹಿರಿಯ ಸಿಐಎಸ್ಎಫ್ ಅಧಿಕಾರಿ ಪಿಟಿಐ ಗೆ ಮಾಹಿತಿ ನೀಡಿದ್ದು, 100 ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗುತ್ತಿದೆ. ದೆಹಲಿ ಹಾಗೂ ಮುಂಬೈ ವಿಮಾನ ನಿಲ್ದಾಣಗಳಲ್ಲಿ ತಲಾ 4,500 ಸಿಬ್ಬಂದಿಗಳ ನೇಮಕಕ್ಕೆ ಅವಕಾಶವಿದೆ. ಇಷ್ಟೇ ಪ್ರಮಾಣದ ಸಿಬ್ಬಂದಿಗಳನ್ನು ಹೆಚ್ಚು ದಟ್ಟಣೆ ಎದುರಿಸುತ್ತಿರುವ ವಿಮಾನ ನಿಲ್ದಾಣಗಳಲ್ಲೂ ನಿಯೋಜಿಸುವುದಕ್ಕೆ ಅವಕಾಶವಿದೆ" ಎಂದು ಹೇಳಿದ್ದಾರೆ.

SCROLL FOR NEXT