ದೇಶ

ತಮಿಳುನಾಡು: ಸಚಿವರಾಗಿ ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಪ್ರಮಾಣ ವಚನ ಸ್ವೀಕಾರ

Shilpa D

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಮಗ ಉದಯನಿಧಿ ಸ್ಟಾಲಿನ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ಧಾರೆ.

ಇಂದು ಬೆಳಿಗ್ಗೆ 9.15ರ ಸುಮಾರಿಗೆ ತಮಿಳು ಕಾರ್ತಿಕ ಮಾಸದ ಶುಭ ಮುಹೂರ್ತದಲ್ಲಿ ಅವರು ಪ್ರಮಾಣವಚನ ಸ್ವಿಕರಿಸಿದರು. ರಾಜ್ಯಪಾಲ ಆರ್‌.ಎನ್. ರವಿ, ಉದಯನಿಧಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಚೆನ್ನೈನ ಚೆಪಾಕ್–ತಿರುವಲ್ಲಿಕೇನಿ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಉದಯ್ ಅವರಿಗೆ, ಯುವಜನ, ಕ್ರೀಡಾಭಿವೃದ್ಧಿ ಮತ್ತು ವಿಶೇಷ ಕಾರ್ಯಕ್ರಮಗಳ ಜಾರಿ ಇಲಾಖೆ ಖಾತೆ ಸಿಗುವ ಸಾಧ್ಯತೆ ಇದೆ.

ಕೆಲವೇ ನಿಮಿಷಗಳಲ್ಲಿ ಮುಗಿದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಹಾಗೂ ಮೈತ್ರಿ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

SCROLL FOR NEXT