ದೇಶ

ತವಾಂಗ್ ಗಡಿ ಸಂಘರ್ಷ: ಉತ್ತರದ ಗಡಿರೇಖೆಯ ಉದ್ದಕ್ಕೂ ಪರಿಸ್ಥಿತಿ ಸ್ಥಿರವಾಗಿದೆ; ಪೂರ್ವ ಸೇನಾ ಕಮಾಂಡರ್

Manjula VN

ಕೋಲ್ಕತಾ: ಉತ್ತರ ಗಡಿ ಭಾಗದ ಗಡಿ ಪ್ರದೇಶಗಳ ಪರಿಸ್ಥಿತಿ ಸ್ಥಿರವಾಗಿದೆ ಎಂದು ಪೂರ್ವ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಆರ್‌ಪಿ ಕಲಿತಾ ಅವರು ಶುಕ್ರವಾರ ಹೇಳಿದ್ದಾರೆ.

ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ನಲ್ಲಿ ಚೀನಾ ಹಾಗೂ ಭಾರತೀಯ ಸೇನಾಪಡೆಯ ನಡುವೆ ನಡೆದ ಘರ್ಷಣೆ ಕುರಿತು ಮಾತನಾಡಿದ ಅವರು, ವಾಸ್ತವಿಕ ನಿಯಂತ್ರಣ ರೇಖೆಯ ಕುರಿತು ಭಾರತೀಯ ಸೇನೆ ಮತ್ತು ಚೀನಾದ ಪಿಎಲ್ಎಯಿಂದ ವಿಭಿನ್ನ ಗ್ರಹಿಕೆಗಳಿವೆ. ತವಾಂಗ್ ಸೆಕ್ಟರ್‌ನಲ್ಲಿರುವ ಹಲವು ಪ್ರದೇಶಗಳ ಪೈಕಿ ಒಂದರಲ್ಲಿ ಚೀನಾ ನಿಯಮ ಉಲ್ಲಂಘಿಸಿತು. ಇದನ್ನು ಭಾರತೀಯ ಸೇನಾಪಡೆ ದಿಟ್ಟವಾಗಿ ಎದುರಿಸಿದರು ಎಂದು ಹೇಳಿದರು.

ಈ ಘರ್ಷಣೆ ದೈಹಿಕ ಹಿಂಸಾಚಾರಕ್ಕೆ ಕಾರಣವಾಯಿತು. ಆದರೆ, ಸ್ಥಳೀಯ ಮಟ್ಟದಲ್ಲಿ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಕಾರ್ಯವಿಧಾನಗಳು ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಿ ಪರಿಸ್ಥಿತಿ ತಿಳಿಗೊಳಿಸಲಾಯಿತು ಎಂದು ತಿಳಿಸಿದ್ದಾರೆ.

ಉಭಯ ರಾಷ್ಟ್ರಗಳ ಸೇನೆಯ ಕೆಲವು ಯೋಧರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘರ್ಷಣೆ ಬಳಿಕ  ಬುಮ್ಲಾದಲ್ಲಿ ನಿಯೋಗ ಮಟ್ಟದಲ್ಲಿ ಧ್ವಜ ಸಭೆ ನಡೆಸಲಾಯಿತು. ಮಾತುಕತೆ ಮೂಲಕ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದಿದ್ದಾರೆ.

SCROLL FOR NEXT