ವಿದೇಶಿ ವಿನಿಮಯ ಮೀಸಲು 2.91 ಡಾಲರ್ ನಿಂದ 564.06 ಬಿಲಿಯನ್ ಡಾಲರ್ ಗೆ ಏರಿಕೆ
ಭಾರತದ ವಿದೇಶಾಂಗ ಮೀಸಲು 2.908 ಬಿಲಿಯನ್ ನಿಂದ 564.06 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.
ನವದೆಹಲಿ: ಭಾರತದ ವಿದೇಶಾಂಗ ವಿನಿಮಯ ಮೀಸಲು 2.908 ಬಿಲಿಯನ್ ನಿಂದ 564.06 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.
ಡಿ.09 ರಂದು ಅಂತ್ಯಗೊಂಡ ವಾರದಲ್ಲಿ ಈ ಬೆಳವಣಿಗೆ ದಾಖಲಾಗಿದ್ದು, ಒಟ್ಟಾರೆ ವಿದೇಶಾಂಗ ಮೀಸಲು 11 ಬಿಲಿಯನ್ ಡಾಲರ್ ನಿಂದ 561.16 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಸತತ 5 ನೇ ವಾರ ವಿದೇಶಿ ಮೀಸಲು ಏರಿಕೆಯಾಗಿದೆ. 2021 ರ ಅಕ್ಟೋಬರ್ ತಿಂಗಳಲ್ಲಿ ವಿದೇಶಿ ಮೀಸಲು ಸಾರ್ವಕಾಲಿಕ ದಾಖಲೆ 645 ಬಿಲಿಯನ್ ಡಾಲರ್ ಗೆ ಏರಿಕೆಯಾಗಿತ್ತು.
ಜಾಗತಿಕ ಬೆಳವಣಿಗೆಯ ಪರಿಣಾಮ ರೂಪಾಯಿ ಮೌಲ್ಯವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲು ಕೇಂದ್ರೀಯ ಬ್ಯಾಂಕ್ ಮೀಸಲನ್ನು ಬಳಕೆ ಮಾಡಿದ್ದರ ಪರಿಣಾಮ ಮೀಸಲು ಕುಸಿತವಾಗಿದೆ.
ಮೀಸಲಿನ ಪ್ರಮುಖ ಭಾಗವಾಗಿರುವ ವಿದೇಶಿ ಕರೆನ್ಸಿ ಆಸ್ತಿ (ಎಫ್ ಸಿಎ) ಸಹ 3.141 ಬಿಲಿಯನ್ ಡಾಲರ್ ನಿಂದ 500.125 ಬಿಲಿಯನ್ ಡಾಲರ್ ಏರಿಕೆಯಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.