ಅಶೋಕ್ ಗೆಹ್ಲೋಟ್ 
ದೇಶ

ಬಿಪಿಎಲ್ ಕುಟುಂಬಕ್ಕೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌: ರಾಜಸ್ಥಾನ ಸಿಎಂ ಗೆಹ್ಲೋಟ್ ಘೋಷಣೆ

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮುಂದಿನ ವರ್ಷ ಏಪ್ರಿಲ್ 1 ರಿಂದ 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ಘೋಷಿಸಿದ್ದಾರೆ.

ಜೈಪುರ: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮುಂದಿನ ವರ್ಷ ಏಪ್ರಿಲ್ 1 ರಿಂದ 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ಘೋಷಿಸಿದ್ದಾರೆ.

"ಬೆಲೆ ಏರಿಕೆ ವಿಷಯ ಗಂಭೀರವಾಗಿದೆ. ಮುಂದಿನ ವರ್ಷ ಏಪ್ರಿಲ್ 1 ರ ನಂತರ ನಾವು ಬಿಪಿಎಲ್ ಕುಟುಂಬಗಳಿಗೆ  ಪ್ರತಿ ಸಿಲಿಂಡರ್ ಗೆ 500 ರೂಪಾಯಿಯಂತೆ ಒಂದು ವರ್ಷದಲ್ಲಿ 12 ಗ್ಯಾಸ್ ಸಿಲಿಂಡರ್ಗಳನ್ನು ನೀಡುತ್ತೇವೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ.

ಯಾರೂ ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನಗಳಿಂದ ವಂಚಿತರಾಗಬಾರದು. ಬಡತನ ರೇಖೆಗಿಂತ ಕೆಳಗಿರುವ ಮತ್ತು ಉಜ್ವಲ ಯೋಜನೆಗೆ ಅಡಿಯಲ್ಲಿ ಅಡುಗೆ ಅನಿಲ ಪಡೆಯುತ್ತಿರುವ ಜನರಿಗೆ ರಾಜಸ್ಥಾನ ಸರ್ಕಾರ 500 ರೂ.ಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ನೀಡಲಿದೆ ಎಂದು ಅಲ್ವಾರ್ನಲ್ಲಿ ಗೆಹ್ಲೋಟ್ ಹೇಳಿದ್ದಾರೆ.

ಮುಂದಿನ ತಿಂಗಳು ನಾನು ಬಜೆಟ್‌ಗೆ ಸಿದ್ಧತೆ ನಡೆಸುತ್ತಿದ್ದೇನೆ. ಈ ಸಮಯದಲ್ಲಿ ನಿಮ್ಮ ಮುಂದೆ ಈ ಘೋಷಣೆಯನ್ನು ಮಾಡುತ್ತಿದ್ದೇನೆ. ಉಜ್ವಲ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರು ಬಡವರಿಗೆ ಎಲ್‌ಪಿಜಿ ಸಂಪರ್ಕಗಳನ್ನು ನೀಡಿದರು. ಆದರೆ ಈಗ ಆ ಸಿಲಿಂಡರ್ ಖಾಲಿಯಾಗಿದೆ, ಏಕೆಂದರೆ ಸಿಲಿಂಡರ್ ದರಗಳು ಈಗ 400ರಿಂದ 1,040 ರೂ.ಗೆ ಹೆಚ್ಚಾಗಿದೆ ಎಂದು ಗೆಹ್ಲೋಟ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೆ ಗ್ರಾಹಕರಿಗೆ ಶಾಕ್: ಪೆಟ್ರೋಲ್, ಡೀಸೆಲ್ ದರ ಏರಿಕೆ

ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಧನ ಸಮಾವೇಶ: ಗಿನ್ನೆಸ್ ದಾಖಲೆಗೆ ತುಮಕೂರು ಸಜ್ಜು!

IPL 2026: ಸನ್ ರೈಸರ್ಸ್ ವಿರುದ್ಧ ಗೆದ್ದ ಬಳಿಕ 'ವಿಸಿಲ್ ಪೋಡು' ಮೂಲಕ CSK ಅಭಿಮಾನಿಗಳನ್ನು ಕೆಣಕಿದ ಇಶಾನ್ ಕಿಶನ್! Video

Gautam Adaniಗೆ ಬಿಗ್ ರಿಲೀಫ್: ಎಲ್ಲ ಪ್ರಕರಣಗಳ ವಿಚಾರಣೆ ಶಾಶ್ವತವಾಗಿ ಕೈ ಬಿಟ್ಟ ಅಮೆರಿಕ: ವರದಿ

ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ: ಒಡಿಶಾ ಮೂಲದ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

SCROLL FOR NEXT