ಸಾಂದರ್ಭಿಕ ಚಿತ್ರ 
ದೇಶ

ಧಾರ್ಮಿಕ ಬೋಧನೆಗಳ ವೈವಿಧ್ಯತೆಯನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಎತ್ತಿ ತೋರಿಸಬೇಕು: ಸಂಸದೀಯ ಸಮಿತಿ ಶಿಫಾರಸು

ಕಾರ್ಯತಂತ್ರದ ಪ್ರಾಮುಖ್ಯತೆಯ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಪ್ರಗತಿ, ಧಾರ್ಮಿಕ ಬೋಧನೆಗಳ ವೈವಿಧ್ಯತೆ ಮತ್ತು ಪ್ರಮುಖ ಮಹಿಳಾ ವ್ಯಕ್ತಿಗಳು ಮತ್ತು ಅಸಾಧಾರಣ ವೀರರ ಕೊಡುಗೆಯನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಉಲ್ಲೇಖ ಮಾಡಿ ಅವರ ಬಗ್ಗೆ ಮಕ್ಕಳಿಗೆ ಪರಿಚಯ ಬೋಧನೆ ಮಾಡಬೇಕು ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ.

ನವದೆಹಲಿ: ಕಾರ್ಯತಂತ್ರದ ಪ್ರಾಮುಖ್ಯತೆಯ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಪ್ರಗತಿ, ಧಾರ್ಮಿಕ ಬೋಧನೆಗಳ ವೈವಿಧ್ಯತೆ ಮತ್ತು ಪ್ರಮುಖ ಮಹಿಳಾ ವ್ಯಕ್ತಿಗಳು ಮತ್ತು ಅಸಾಧಾರಣ ವೀರರ ಕೊಡುಗೆಯನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಉಲ್ಲೇಖ ಮಾಡಿ ಅವರ ಬಗ್ಗೆ ಮಕ್ಕಳಿಗೆ ಪರಿಚಯ ಬೋಧನೆ ಮಾಡಬೇಕು ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (NCERT) ಸಮನ್ವಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಪಠ್ಯಪುಸ್ತಕಗಳಲ್ಲಿ ಸಮಾನವಾಗಿ ಒತ್ತು ನೀಡಬೇಕೆಂದು ಸಮಿತಿಯು ಒತ್ತಿಹೇಳಿದೆ.

''ಶಾಲಾ ಪಠ್ಯ ಪುಸ್ತಕಗಳ ವಿಷಯ ಮತ್ತು ವಿನ್ಯಾಸದಲ್ಲಿ ಸುಧಾರಣೆಗಳು” ಕುರಿತು 331 ನೇ ವರದಿಯಲ್ಲಿ ಮಾಡಲಾದ ಶಿಫಾರಸುಗಳು ಮತ್ತು ಅವಲೋಕನಗಳ ಕುರಿತು ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಸಮಿತಿಯ ವರದಿಯನ್ನು ನಿನ್ನೆ ಸಂಸತ್ತಿನಲ್ಲಿ ಮಂಡಿಸಲಾಯಿತು.

ಹಲವಾರು ವರ್ಷಗಳಿಂದ ಕಡೆಗಣಿಸಲ್ಪಟ್ಟಿರುವ ಸ್ಥಳೀಯ ವೀರರು, ಪುರುಷರು ಮತ್ತು ಮಹಿಳೆಯರು, ಶಾಲಾ ಪಠ್ಯಪುಸ್ತಕಗಳಲ್ಲಿ ದೇಶದ ಇತಿಹಾಸ ಮತ್ತು ಏಕತೆಗೆ ಅವರ ಕೊಡುಗೆಗಳನ್ನು ಪಠ್ಯದಲ್ಲಿ ಒತ್ತು ನೀಡಿ ಉಲ್ಲೇಖಿಸಬೇಕೆಂದು ಸಮಿತಿಯು ಹೇಳಿದೆ.

ಈ ಉದ್ದೇಶಕ್ಕಾಗಿ, ಹೊಸ ಎನ್‌ಸಿಎಫ್ (ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು) ಸಿದ್ಧಪಡಿಸುವ ತಳಹದಿಯು ಮುದ್ರಿತ ವಸ್ತುಗಳನ್ನು ಮಾತ್ರವಲ್ಲದೆ ಹಿರಿಯರ ಸಹಾಯದಿಂದ ಸ್ಥಳೀಯ ಮೌಖಿಕ ಸಂಪ್ರದಾಯಗಳು ಮತ್ತು ಜಾನಪದ ಅಧ್ಯಯನದ ಮೂಲಕ ಉಲ್ಲೇಖವನ್ನು ಒಳಗೊಂಡಿರಬಹುದು ಎಂದು ವರದಿ ತಿಳಿಸಿದೆ. ಶಾಲಾ ಪಠ್ಯ ಪುಸ್ತಕಗಳ ವಿಷಯ ಮತ್ತು ವಿನ್ಯಾಸದಲ್ಲಿ ಸುಧಾರಣೆ ಸಮಿತಿ ಹೇಳಿದೆ.

ಎಲ್ಲಾ ಪುರಾತನ ಗ್ರಂಥಗಳಲ್ಲಿ ಹೊರತಂದಿರುವ ಧಾರ್ಮಿಕ ಬೋಧನೆಗಳ ವೈವಿಧ್ಯತೆ ಮತ್ತು ಶಾಲಾ ಪಠ್ಯಪುಸ್ತಕಗಳ ಮೂಲಕ ಶೈಕ್ಷಣಿಕ ಮತ್ತು ಧಾರ್ಮಿಕ ಪಠ್ಯಗಳನ್ನು ಎತ್ತಿ ತೋರಿಸಲು ಇಲಾಖೆಯು ಸಾಕಷ್ಟು ಪ್ರಯತ್ನಗಳನ್ನು ಮಾಡಬಹುದು ಮತ್ತು ಪರಿಷ್ಕೃತ ಎನ್‌ಸಿಎಫ್‌ನಲ್ಲಿ ಅದನ್ನು ಅಳವಡಿಸಬಹುದು ಎಂದು ವರದಿ ಹೇಳಿದೆ.

ವಿಶ್ವದ ಸನ್ನಿವೇಶದಲ್ಲಿ ಭಾರತದ ಉದಯ, ವಿಶೇಷವಾಗಿ ಆರ್ಥಿಕ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಯ ಬೆಳಕಿನಲ್ಲಿ, ರಕ್ಷಣಾ ಉತ್ಪಾದನೆ ಮತ್ತು ಒಟ್ಟಾರೆ ಅಭಿವೃದ್ಧಿಯು ಇತರ ದೇಶಗಳಿಗೆ, ವಿಶೇಷವಾಗಿ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿರುವ ದೇಶಗಳಿಗೆ ಹೋಲಿಸಿದರೆ ಸೂಕ್ತವಾಗಿ ಎತ್ತಿ ತೋರಿಸಬಹುದು ಎಂದು ಸಮಿತಿಯು ಹೇಳಿದೆ.

"ಭಾರತ ಮತ್ತು ಇತರ ದೇಶಗಳ ಇತಿಹಾಸಗಳ ನಡುವಿನ ಅಂತರ-ಸಂಪರ್ಕ, ವಿಶೇಷವಾಗಿ ಭಾರತದ ಪೂರ್ವ ನೋಟ ನೀತಿಯ ಸಂದರ್ಭದಲ್ಲಿ, ಶಾಲಾ ಪಠ್ಯಕ್ರಮದಲ್ಲಿ ಪ್ರತಿಫಲಿಸಬಹುದು. ಶಾಲಾ ಇತಿಹಾಸ ಪಠ್ಯಪುಸ್ತಕಗಳಲ್ಲಿ ಸ್ಥಾನವನ್ನು ಕಂಡುಕೊಳ್ಳಬಹುದು" ಎಂದು ಸಂಸದೀಯ ಸಮಿತಿಯ ವರದಿ ಹೇಳಿದೆ.

ಪಠ್ಯಪುಸ್ತಕಗಳು ಮತ್ತು ಇತರ ವಿಷಯಗಳ ಪರಿಶೀಲನೆಗೆ ನಿಯಂತ್ರಕ ಕಾರ್ಯವಿಧಾನವನ್ನು ಹೊಂದುವ ಅವಶ್ಯಕತೆಯಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಈ ನಿಟ್ಟಿನಲ್ಲಿ ಸೂಕ್ತ ಮುಂದಿನ ಕ್ರಮವನ್ನು ತ್ವರಿತವಾಗಿ ಪ್ರಾರಂಭಿಸಲು ಶಿಫಾರಸು ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT