ದೇಶ

ನಾಗಪುರ: ದೇಶಕ್ಕೆ ಇಬ್ಬರು ರಾಷ್ಟ್ರಪಿತ- ಅಮೃತಾ ಫಡ್ನವೀಸ್ 

Nagaraja AB

ನಾಗಪುರ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಷ್ಟ್ರಪಿತ ಎಂದು ಕರೆದಿದ್ದಾರೆ.

ಆದರೆ ತದನಂತರ, ಆ ಗೌರವಾರ್ಥವನ್ನು ಸಾಮಾನ್ಯವಾಗಿ ನೀಡುವ ಮಹಾತ್ಮ ಗಾಂಧಿ ಅವರನ್ನು ಕೂಡಾ ಹಿಂದಿನ ರಾಷ್ಟ್ರಪಿತ ಎಂದು ಹೇಳುವ ಮೂಲಕ ಸಂಭಾವ್ಯ ವಿವಾದದಿಂದ ನುಣುಚಿಕೊಂಡರು.

ಸಂದರ್ಶನದಲ್ಲಿ ಮೋದಿ ಅವರು ರಾಷ್ಟ್ರಪಿತರಾದರೆ ಗಾಂಧಿ ಅವರು ಯಾರು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮೃತಾ ಫಡ್ನವೀಸ್, ಮಹಾತ್ಮ ಗಾಂಧಿ ದೇಶದ ರಾಷ್ಟ್ರಪಿತರಾದರೆ, ಮೋದಿ ಅವರು ನವಭಾರತದ ಪಿತಾಮಹ, ಒಬ್ಬರು ಈ ಯುಗದಲ್ಲಿ ಬಂದರೆ, ಮತ್ತೋರ್ವರು ಅಂದಿನ ಯುಗದಲ್ಲಿ ಬಂದವರು ಎಂದು ಹೇಳಿದರು. 

ಅಮೃತಾ ಫಡ್ನವೀಸ್ ಅವರ ಹೇಳಿಕೆಯನ್ನು ಕಾಂಗ್ರೆಸ್ ಟೀಕಿಸಿದೆ. ಬಿಜೆಪಿಯವರು ಮತ್ತೆ ಗಾಂಧಿ ಅವರನ್ನು ಹಿನ್ನೆಲೆಗೆ ತಳ್ಳುತ್ತಾ ಇತಿಹಾಸವನ್ನು ಬದಲಾಯಿಸಲು ಹೊರಟಿದ್ದಾರೆ ಎಂದು ಮಾಜಿ ಸಚಿವೆ ಯಶೋಮತಿ ಠಾಕೂರ್ ಆಕ್ರೋಶ  ಹೊರಹಾಕಿದ್ದಾರೆ. 
 

SCROLL FOR NEXT