ದೇಶ

ದುಬೈನಲ್ಲಿ ಖುಲಾಯಿಸಿದ ಅದೃಷ್ಟ; ತೆಲಂಗಾಣ ನಿವಾಸಿಗೆ ಲಭಿಸಿದ 33 ಕೋಟಿ ರೂ.ಲಾಟರಿ

Srinivasamurthy VN

ಸಾರಂಗಪುರ: ಉದ್ಯೋಗಕ್ಕಾಗಿ ದುಬೈನ ತೆರಳಿದ ಯುವಕನಿಗೆ ಲಾಟರಿ ರೂಪದಲ್ಲಿ ಜಾಕ್‌ಪಾಟ್‌ ತಗುಲಿದ್ದು, ಬರೊಬ್ಬರಿ 33 ಕೋಟಿ ರೂಗಳ ಒಡೆಯನಾಗಿದ್ದಾನೆ.

ಹೌದು.. ತೆಲಂಗಾಣದ ಜಗಿತ್ಯಾಲ ಜಿಲ್ಲೆಯ ಬೀರ್‌ಪುರ ಮಂಡಲ ತುಂಗೂರ್‌ ಗ್ರಾಮದ ಯುವಕ ಓಗುಲ ಅಜಯ್‌ಗೆ ಅದೃಷ್ಟ ಒಲಿದಿದ್ದು, ದುಬೈ ಎಮಿರೇಟ್ಸ್ ನ ಈಸಿ ಗ್ರಾಂಡ್ ಪ್ರೈಜ್ ಲಾಟರಿಯಲ್ಲಿ 15 ಮಿಲಿಯನ್ (ಸುಮಾರು 33 ಕೋಟಿ ರೂ) ಹಣ ಒಲಿದುಬಂದಿದೆ.

ಒಗುಲ ದೇವರಾಜಂ-ಪ್ರಮೀಳ ದಂಪತಿಗಳಿಗೆ ಇಬ್ಬರು ಪುತ್ರರು ಅಜಯ್‌, ರಾಕೇಶ್‌, ಮಗಳು ರಮ್ಯಾ ಇದ್ದಾರೆ. ತಂದೆ ದೇವರಾಜಂ ಸಾವನ್ನಪ್ಪಿದ್ದರಿಂದ ಉದ್ಯೋಗಕ್ಕಾಗಿ ಅಜಯ್‌ ದುಬೈಗೆ ಹೋಗಿದ್ದನು. ದುಬೈನಲ್ಲಿ ಆಭರಣ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ತಿಂಗಳ 15 ರಂದು ಎಮಿರೇಟ್ಸ್ ಕಂಪನಿಯ ಎರಡು ಲಾಟರಿ ಟಿಕೆಟ್‌ಗಳನ್ನು ರೂ.15 ದರದಲ್ಲಿ ಖರೀದಿಸಿದ್ದ. ಈ ತಿಂಗಳ 16 ರಂದು ಇದರ ಡ್ರಾ ಪ್ರಕ್ರಿಯೆ ನಡೆದಿತ್ತು. ಇದರಲ್ಲಿ ಅಜಯ್ ಖರೀದಿಸಿದ್ದ ಲಾಟರಿಗೆ 155 ಮಿಲಿಯನ್ ದಿರ್ಹಾಮ್ಸ್ ಬಹುಮಾನ ಒಲಿದಿತ್ತು. ಈ ವಿಚಾರ ತಿಳಿದ ಅಜಯ್ ತನ್ನ ಹುಟ್ಟೂರಾದ ತುಗೂರು ಗ್ರಾಮದಲ್ಲಿರುವ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಭ್ರಮಾಚರಣೆ ಮಾಡಿದ್ದಾರೆ.

ಅಲ್ಲದೆ ಈ ಕುರಿತ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ನಲ್ಲಿ ನಾನು ಎರಡು ಲಾಟರಿ ಟಿಕೆಟ್‌ಗಳನ್ನು ಖರೀದಿಸಿದ್ದ. ಗೆಲ್ಲುವ ಆರು-ಅಂಕಿಯ ಸಂಖ್ಯೆಗೆ ಹೊಂದಿಕೆಯಾಗುವ ಸಂಖ್ಯೆಗಳನ್ನು ಕಂಡುಕೊಂಡಾಗ ನನಗೆ ಆಶ್ಚರ್ಯವಾಯಿತು. ಸಂಪತ್ತು ಭಾರತೀಯ ಕರೆನ್ಸಿಯಲ್ಲಿ ಸುಮಾರು `33 ಕೋಟಿ' ಎಂದು ಅವರು ಅಜಯ್ ಮಾಹಿತಿ ನೀಡಿದ್ದಾರೆ.  ಈ ಪೈಕಿ ತೆರಿಗೆ ಕಡಿತವಾಗಿ 30 ಕೋಟಿ ರೂ ಹಣ ಕೈಗೆ ಸಿಗಲಿದೆ ಎಂದು ಹೇಳಿದ್ದಾರೆ.

"ನಾನು ಅಭಿನಂದನಾ ಇಮೇಲ್ ಸ್ವೀಕರಿಸಿದಾಗ ನಾನು ನನ್ನ ಸ್ನೇಹಿತನೊಂದಿಗೆ ಹೊರಗಿದ್ದೆ. ಬಹುಶಃ ಇದು ಒಂದು ಸಣ್ಣ ಮೊತ್ತವಾಗಿರಬಹುದು ಎಂದು ನಾನು ಯೋಚಿಸಿದ್ದೆ ಎಂದು ಅವರು ಹೇಳಿದರು.
 

SCROLL FOR NEXT