ಮೃತ ಯುವತಿ ನೀಲ್ ಕುಸುಮ್ 
ದೇಶ

20 ವರ್ಷದ ಯುವತಿಯ ಬಾಯಿ ಮುಚ್ಚಿ ಸ್ಕ್ರೂಡ್ರೈವರ್‌ನಿಂದ 51 ಬಾರಿ ಇರಿದು ಕೊಂದ ಕ್ರೂರಿ!

ತನ್ನ ಜೊತೆ ಮಾತನಾಡಲು ನಿರಾಕರಿಸಿದ 20 ವರ್ಷದ ಯುವತಿಯನ್ನು ವ್ಯಕ್ತಿಯೋರ್ವ ಸ್ಕ್ರೂಡ್ರೈವರ್‌ನಿಂದ 51 ಬಾರಿ ಇರಿದು ಕೊಂದಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. 

ಕೊರ್ಬಾ(ಛತ್ತೀಸ್‌ಗಢ): ತನ್ನ ಜೊತೆ ಮಾತನಾಡಲು ನಿರಾಕರಿಸಿದ 20 ವರ್ಷದ ಯುವತಿಯನ್ನು ವ್ಯಕ್ತಿಯೋರ್ವ ಸ್ಕ್ರೂಡ್ರೈವರ್‌ನಿಂದ 51 ಬಾರಿ ಇರಿದು ಕೊಂದಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. 

ಕಳೆದ ಶನಿವಾರ ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (ಎಸ್ ಇಸಿಎಲ್)ನ ಪಂಪ್ ಹೌಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಅಂದಿನಿಂದ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪೊಲೀಸರ ಪ್ರಕಾರ, ಆರೋಪಿ ಜಶ್ಪುರ್ ಜಿಲ್ಲೆಯ ನಿವಾಸಿಯಾಗಿದ್ದು, ಯುವತಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆಕೆಯನ್ನು ಭೇಟಿಯಾಗಲು ಆರೋಪಿ ಬಂದಿದ್ದನು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು ಕೊನೆಗೆ ಆತ ಆಕೆಯ ಬಾಯಿಯನ್ನು ಕಟ್ಟಿ ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಸಂತ್ರಸ್ತೆಯ ಸಹೋದರ ಸೋಮವಾರ ಮನೆಗೆ ಬಂದಾಗ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. 

ಪೊಲೀಸರ ಪ್ರಕಾರ, ಆರೋಪಿ ಮೂರು ವರ್ಷಗಳ ಹಿಂದೆ ಸಂತ್ರಸ್ತೆಯ ಜೊತೆ ಸ್ನೇಹ ಬೆಳೆಸಿದ್ದನು. ಆತ ಪ್ರಯಾಣಿಕರ ಬಸ್‌ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದನು. ಅದೇ ಬಸ್ ನಲ್ಲಿ ಯುವತಿ ಪ್ರಯಾಣಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. 'ಆರೋಪಿ ನಂತರ ಕೆಲಸಕ್ಕಾಗಿ ಗುಜರಾತ್‌ನ ಅಹಮದಾಬಾದ್‌ಗೆ ತೆರಳಿದನು. ಇಬ್ಬರೂ ಫೋನ್‌ನಲ್ಲಿ ಸಂಪರ್ಕದಲ್ಲಿದ್ದರು.

ಆದರೆ ಕಾಲಕ್ರಮೇಣ ಮಹಿಳೆ ಆತನೊಂದಿಗೆ ಫೋನ್‌ನಲ್ಲಿ ಮಾತನಾಡುವುದನ್ನು ನಿಲ್ಲಿಸಿದಾಗ, ಆರೋಪಿ ಅವಳನ್ನು ಭೇಟಿಯಾಗಲು ಕೊರ್ಬಾಗೆ ಬಂದಿದ್ದು ಈ ದೃಷ್ಕೃತ್ಯ ಎಸಗಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಿತ್ರ..., My Friend... ಎನ್ನುತ್ತಲೇ ಭಾರತದ ಬೆನ್ನಿಗೆ ಚೂರಿ!; US ಸೇನೆ ಜೊತೆ ನಂಟು ಹೊಂದಿದ್ದ ವ್ಯಕ್ತಿ ಈಶಾನ್ಯ ರಾಜ್ಯದಲ್ಲಿ; ದೇಶದ ವಿರುದ್ಧ ಸಂಚು!

ರಾಜ್ಯಾದ್ಯಂತ ಮಳೆ ಆರ್ಭಟ: ಬೆಂಗಳೂರು ಹೈರಾಣ, ಇನ್ನೂ 3 ದಿನ ಮಳೆ ಸಾಧ್ಯತೆ!

'ಭಾರತ ಆಪ್ತ ಸ್ನೆಹಿತ', 'ಪಾಕಿಸ್ತಾನಕ್ಕೆ ತುಂಬಾ ಕೆಟ್ಟದಾಗಿರುತ್ತದೆ': ಆಫ್ಘನ್ ಕ್ರಿಕೆಟಿಗ Allah Ghazanfar ಎಚ್ಚರಿಕೆ

ಲವ್ ಅಲ್ಲ ಅದು 'ಬಲವಂತದ ಮದುವೆ': ಕಾಂಗ್ರೆಸ್‌ ಜತೆ ವಿಚ್ಛೇದನಕ್ಕೆ ಕಾರಣ ಬಿಚ್ಚಿಟ್ಟ ದೇವೇಗೌಡ!

'ಅಶ್ಲೀಲ ಅಲ್ಲ, ಹಾಡನ್ನು Rewrite ಮಾಡ್ತೇನೆ': ನಿರ್ದೇಶಕ Prem ಕ್ಷಮೆಯಾಚನೆ! ನಟಿ ನೋರಾ, ಸಾಹಿತಿ ಅಲಂ ಬಗ್ಗೆಯೂ ಕಿಡಿ! Video

SCROLL FOR NEXT