ಭಾರತ್ ಬಯೋಟೆಕ್ ನಾಸಲ್ ಕೋವಿಡ್ ಲಸಿಕೆ 
ದೇಶ

ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಗೆ ದರ ನಿಗದಿ: ಒಂದು ಡೋಸ್​ಗೆ 800 ರೂಪಾಯಿ!

ವಿಶ್ವದ ಮೊದಲ ಇಂಟ್ರಾನಾಸಲ್‌ ಕೋವಿಡ್ ಲಸಿಕೆ‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಭಾರತ್ ಬಯೋಟೆಕ್ ಸಂಸ್ಥೆಯ iNCOVACC ಅಥವಾ BBV154 ಕೋವಿಡ್ ಲಸಿಕೆಗೆ ದರ ನಿಗದಿ ಮಾಡಲಾಗಿದ್ದು, ಪ್ರತೀ ಡೋಸ್​ಗೆ 800 ರೂಪಾಯಿ ನಿಗದಿ ಪಡಿಸಲಾಗಿದೆ ಎಂದು ತಿಳಿದುಬಂದಿದೆ.

ನವದೆಹಲಿ: ವಿಶ್ವದ ಮೊದಲ ಇಂಟ್ರಾನಾಸಲ್‌ ಕೋವಿಡ್ ಲಸಿಕೆ‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಭಾರತ್ ಬಯೋಟೆಕ್ ಸಂಸ್ಥೆಯ iNCOVACC ಅಥವಾ BBV154 ಕೋವಿಡ್ ಲಸಿಕೆಗೆ ದರ ನಿಗದಿ ಮಾಡಲಾಗಿದ್ದು, ಪ್ರತೀ ಡೋಸ್​ಗೆ 800 ರೂಪಾಯಿ ನಿಗದಿ ಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಭಾರತ್‌ ಬಯೋಟೆಕ್‌ ಈ ಲಸಿಕೆಯನ್ನು ವಾಷಿಂಗ್ಟನ್‌ ಯೂನಿವರ್ಸಿಟಿ ಸೇಂಟ್‌ ಲೂಯಿಸ್‌ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿಗದ್ದು, ವಿಶ್ವದ ಮೊದಲ ಇಂಟ್ರಾನಾಸಲ್‌ ಕೋವಿಡ್ ಲಸಿಕೆ‌ ಎಂಬ ಹೆಗ್ಗಳಿಕೆಗೆ iNCOVACC ಅಥವಾ BBV154 ಲಸಿಕೆಯು ಪಾತ್ರವಾಗಿದೆ. ಮೂಗಿನ ಮೂಲಕ ಎರಡು ಹನಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಇದು ಇಂಜೆಕ್ಟ್​ ಮಾಡುವ ಲಸಿಕೆಗಿಂತಲೂ ಸುರಕ್ಷಿತ ಎನ್ನಲಾಗಿದೆ.

ಈ ಇಂಟ್ರಾನಾಸಲ್​ ಲಸಿಕೆಯ ಒಂದು ಡೋಸ್​​ಗೆ ಖಾಸಗಿ ಆಸ್ಪತ್ರೆಗಳಲ್ಲಿ 800 ರೂಪಾಯಿ (+ ಶೇ.5ರಷ್ಟು ಜಿಎಸ್​ಟಿ ಸೇರಿ ಒಂದು ಡೋಸ್​ಗೆ 840 ರೂ.) ಇರಲಿದೆ. ಈ ಲಸಿಕೆ ಸದ್ಯ ಡಿಸೆಂಬರ್​ 23ರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಾಗುತ್ತಿದೆ. ಮುಂಬರುವ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲೂ ಲಭ್ಯವಾಗಲಿದ್ದು, ಇಲ್ಲಿ ಬೆಲೆ ಒಂದು ಡೋಸ್​​ಗೆ 325 ರೂಪಾಯಿ ಇರಲಿದೆ ಎಂದು ಹೇಳಲಾಗಿದೆ.

ಇಲ್ಲಿ ಖಾಸಗಿ ಆಸ್ಪತ್ರೆಗಳು ಲಸಿಕೀಕರಣದ ನಿರ್ವಹಣಾ ವೆಚ್ಚವನ್ನಾಗಿ 150 ರೂಪಾಯಿ ಶುಲ್ಕವನ್ನು ಜನಸಾಮಾನ್ಯರಿಗೆ ವಿಧಿಸಬಹುದಾಗಿದೆ. ಹೀಗೆ ಎಲ್ಲ ಸೇರಿಸಿದರೆ ಈ ಇಂಟ್ರಾನಾಸಲ್​ ಕೊವಿಡ್​ 19 ಲಸಿಕೆಯ ಒಂದು ಡೋಸ್​​ ಪಡೆಯಲು ಸುಮಾರು 1000 ರೂಪಾಯಿ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ವಿಶ್ವದ ಮೊದಲ ಇಂಟ್ರಾನಾಸಲ್‌ ಕೋವಿಡ್ ಲಸಿಕೆ‌ ಎನ್ನಿಸಿರುವ iNCOVACC ನ್ನು ವಾಷಿಂಗ್ಟನ್‌ ಯೂನಿವರ್ಸಿಟಿ ಸೇಂಟ್‌ ಲೂಯಿಸ್‌ ಸಹಭಾಗಿತ್ವದಲ್ಲಿ ಭಾರತ್​ ಬಯೋಟೆಕ್​ ಕಂಪನಿಯು ತಯಾರಿಸಿದೆ. ಈಗಾಗಲೇ ಕೊವ್ಯಾಕ್ಸಿನ್​ ಮತ್ತು ಕೊವಿಶೀಲ್ಡ್​ ಲಸಿಕೆಗಳ ಎರಡೂ ಡೋಸ್​ ಪಡೆದ 18 ವರ್ಷ ಮೇಲ್ಪಟ್ಟವರು, ಈ ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಯನ್ನು ಬೂಸ್ಟರ್​ ಡೋಸ್​ ಆಗಿ ಪಡೆಯಬಹುದಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಪ್ರಕರಣ: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT