ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕಾಂಗ್ರೆಸ್ ಚೇತರಿಕೆ ಹಾದಿಯಲ್ಲಿದೆ, ಬಿಜೆಪಿಗೆ ರಾಹುಲ್ ಗಾಂಧಿಯೇ ಮದ್ದು: ತಮಿಳುನಾಡು ಸಿಎಂ ಸ್ಟಾಲಿನ್

ಮಿತ್ರ ಪಕ್ಷವಾದ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ತನ್ನ ಪ್ರಸ್ತುತತೆ ಅಥವಾ ಪ್ರಾಮುಖ್ಯತೆಯನ್ನು ಇನ್ನೂ ಕಳೆದುಕೊಂಡಿಲ್ಲ ಎಂದ ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರು, 2024ರ ಲೋಕಸಭೆ ಚುನಾವಣೆಯಲ್ಲಿ...

ಎಂ ಕೆ ಸ್ಟಾಲಿನ್
Lingaraj Badiger
Updated On : 28 Dec 2022, 4:48 pm

ಚೆನ್ನೈ: ಮಿತ್ರ ಪಕ್ಷವಾದ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ತನ್ನ ಪ್ರಸ್ತುತತೆ ಅಥವಾ ಪ್ರಾಮುಖ್ಯತೆಯನ್ನು ಇನ್ನೂ ಕಳೆದುಕೊಂಡಿಲ್ಲ ಎಂದ ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರು, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ "ರಾಷ್ಟ್ರೀಯ ಮೈತ್ರಿ" ಪರ ಬ್ಯಾಟಿಂಗ್ ಮಾಡಿದ್ದಾರೆ.

"ಕಾಂಗ್ರೆಸ್ ಈಗ ಭಾರತಕ್ಕೆ ಬೇಕಾಗಿದೆ" ಮತ್ತು ಅತ್ಯಂತ ಹಳೆಯ ಪಕ್ಷ "ಪುನ್ಚೇತನ" ಹಾದಿಯಲ್ಲಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.

ಇದೇ ವೇಳೆ "ಸಹೋದರ" ರಾಹುಲ್ ಗಾಂಧಿ ಅವರನ್ನು ಹಾಡಿ ಹೊಗಳಿದ ತಮಿಳುನಾಡು ಸಿಎಂ, ಬಿಜೆಪಿಯ "ಸಂಕುಚಿತ" ರಾಜಕೀಯಕ್ಕೆ ರಾಹುಲ್ ಗಾಂಧಿ "ಅತ್ಯುತ್ತಮ ಮದ್ದು" ಎಂದಿದ್ದಾರೆ.

Advertisement

Advertisement

ಇದನ್ನು ಓದಿ: ಇತಿಹಾಸ ತಿರುಚುವಿಕೆ, "ಕಾಲ್ಪನಿಕ ಕಥೆ" ಸೃಷ್ಟಿ ದೇಶಕ್ಕೆ ಅತ್ಯಂತ ಅಪಾಯ: ತಮಿಳುನಾಡು ಸಿಎಂ ಸ್ಟಾಲಿನ್ ಎಚ್ಚರಿಕೆ

ದೇಶದ ಸಾಂವಿಧಾನಿಕ ಸಂಸ್ಥೆಗಳ ಸ್ವತಂತ್ರ ಕಾರ್ಯನಿರ್ವಹಣೆಯನ್ನು ಕಾಪಾಡಲು ಮತ್ತು ಬಿಜೆಪಿ ವಿರುದ್ಧ ಹೋರಾಡಲು "ರಾಷ್ಟ್ರೀಯ ಮೈತ್ರಿ" ರಚಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸ್ಟಾಲಿನ್ ಹೇಳಿದ್ದಾರೆ.

ತಮಿಳುನಾಡು ಮಾದರಿಯಲ್ಲಿ ದೇಶಾದ್ಯಂತ ರಾಷ್ಟ್ರೀಯ ಪಕ್ಷದೊಂದಿಗೆ ಪ್ರಬಲ ಪ್ರಾದೇಶಿಕ ಪಕ್ಷದ ಮೈತ್ರಿಯ ಅಗತ್ಯ ಇದೆ. ಇತರ ರಾಜ್ಯಗಳಲ್ಲೂ ಪ್ರಬಲ ಪ್ರಾದೇಶಿಕ ಪಕ್ಷಗಳೊಂದಿಗೆ ರಾಷ್ಟ್ರೀಯ ಪಕ್ಷ ಮೈತ್ರಿ ಮಾಡಿಕೊಳ್ಳಬೇಕು ಎಂದು ಡಿಎಂಕೆ ಮುಖ್ಯಸ್ಥರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement