ದೇಶ

ದೆಹಲಿಯಲ್ಲಿ ಮತ್ತೆ ವಾಯುಮಾಲಿನ್ಯ ಹೆಚ್ಚಳ: ಅನಿವಾರ್ಯವಲ್ಲದ ನಿರ್ಮಾಣ ಕಾಮಗಾರಿ ನಿಷೇಧ

Lingaraj Badiger

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ವಾಯುಮಾಲಿನ್ಯ ಹೆಚ್ಚಳವಾಗಿದ್ದು, ಅನಿವಾರ್ಯವಲ್ಲದ ಕಟ್ಟಡ ನಿರ್ಮಾಣ ಕಾಮಗಾರಿ ಮತ್ತು ನೆಲಸಮ ಚಟುವಟಿಕೆಗಳನ್ನು ನಿಷೇಧಿಸಿ ದೆಹಲಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಕೇಂದ್ರದ ವಾಯು ಗುಣಮಟ್ಟ ಸಮಿತಿಯು ಶುಕ್ರವಾರ ದೆಹಲಿ ಹಾಗೂ ಎನ್‌ಸಿಆರ್‌ನಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್(ಜಿಆರ್‌ಎಪಿ)ನ 3ನೇ ಹಂತದ ಅಡಿಯಲ್ಲಿ ನಿರ್ಬಂಧಗಳನ್ನು ಅನುಷ್ಠಾನಕ್ಕೆ ನಿರ್ದೇಶಿಸಿದೆ. ಇದರಲ್ಲಿ ಅನಿವಾರ್ಯವಲ್ಲದ ಕಟ್ಟಡ ನಿರ್ಮಾಣ ಮತ್ತು ನೆಲಸ ಚಟುವಟಿಕೆಗಳ ಮೇಲಿನ ನಿಷೇಧವೂ ಸೇರಿದೆ.

ದೆಹಲಿಯಲ್ಲಿ ಕಳೆದ 24-ಗಂಟೆಗಳ ಸರಾಸರಿ ಗಾಳಿಯ ಗುಣಮಟ್ಟ ಸೂಚ್ಯಂಕವು ಇಂದು 399 ರಷ್ಟಿದೆ. ಇದು ಅತಿ ಹೆಚ್ಚು ಮಾಲಿನ್ಯ ವಿಭಾಗದಿಂದ ಅತ್ಯಂತ ಕಳಪೆ ವಿಭಾಗಕ್ಕೆ ಕುಸಿದಿದೆ. 

ಹೀಗಾಗಿ ದೆಹಲಿ ಸರ್ಕಾರ ತಕ್ಷಣವೇ ಜಾರಿಗೆ ಬರುವಂತೆ ಮಾಲಿನ್ಯ ತಡೆ ಯೋಜನೆಯ 3ನೇ ಹಂತದ ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸುವಂತೆ ದೆಹಲಿ-ಎನ್‌ಸಿಆರ್‌ನ ಅಧಿಕಾರಿಗಳಿಗೆ ಆದೇಶಿಸಿದೆ.

SCROLL FOR NEXT