ಭಾರತೀಯ ಸೇನೆ 
ದೇಶ

ಗಡಿಯಲ್ಲಿ ಪಾಕ್ ಡ್ರೋನ್‌ಗಳನ್ನು ಹೊಡೆದುರುಳಿಸುವ ಬಿಎಸ್‌ಎಫ್ 'ಹಿಟ್' ತಂಡಗಳಿಗೆ 1 ಲಕ್ಷ ಬಹುಮಾನ!

ಗಡಿಯಲ್ಲಿ ಡ್ರೋನ್ ಗಳ ಮೂಲಕ ಪಾಕಿಸ್ತಾನ ಭಾರತಕ್ಕೆ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದೆ. ಇದನ್ನು ತಡೆಗಟ್ಟಲು ಬಿಎಸ್ಎಫ್ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ.

ನವದೆಹಲಿ: ಗಡಿಯಲ್ಲಿ ಡ್ರೋನ್ ಗಳ ಮೂಲಕ ಪಾಕಿಸ್ತಾನ ಭಾರತಕ್ಕೆ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದೆ. ಇದನ್ನು ತಡೆಗಟ್ಟಲು ಬಿಎಸ್ಎಫ್ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ.

ಅದರಂತೆ ಡ್ರೋನ್ ಗಳನ್ನು ಹೊಡೆದುರುಳಿಸುವ ತಂಡಕ್ಕೆ 1 ಲಕ್ಷ ರೂಪಾಯಿ ನಗದು ಬಹುಮಾನ, ಜಾಮರ್‌ಗಳು ಮತ್ತು ಸ್ಪೂಫರ್‌ಗಳನ್ನು ನೀಡಲಿದೆ. ಪಾಕಿಸ್ತಾನದ ಗಡಿಯೂದ್ದಕ್ಕೂ ಸುಸಜ್ಜಿತವಾದ ಬೇಲಿ ಇದ್ದರೂ ಡ್ರೋನ್‌ ದಾಳಿಗೆ ಸಾಕ್ಷಿಯಾಗಿದೆ. ಇನ್ನು ಪಂಜಾಬ್‌ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡ್ರೋನ್ ಹಾವಳಿ ಹೆಚ್ಚಾಗಿದೆ.

ರೈಫಲ್ ಫೈರಿಂಗ್ ಅಥವಾ ಜ್ಯಾಮಿಂಗ್ ತಂತ್ರಜ್ಞಾನದ ಮೂಲಕ ಡ್ರೋನ್ ಅನ್ನು ಉರುಳಿಸುವ ಗಡಿಯಲ್ಲಿನ ಪ್ರತಿ ಬಿಎಸ್‌ಎಫ್ 'ಹಿಟ್' ತಂಡಕ್ಕೆ 1 ಲಕ್ಷ ರೂಪಾಯಿ ನಗದು ಪ್ರೋತ್ಸಾಹಕವನ್ನು ಬಹುಮಾನವಾಗಿ ನೀಡಲಾಗುತ್ತಿದೆ. ಈ ಮೂಲಕ ಡ್ರೋನ್‌ಗಳ ಹಾವಳಿಯ ವಿರುದ್ಧ ಹೋರಾಡಲಾಗುತ್ತಿದೆ ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಂಜಾನ ಜಲಂಧರ್ ಗಡಿಯಲ್ಲಿ ಪಾಕಿಸ್ತಾನದಿಂದ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಪಡೆಯಲು ಡ್ರೋನ್‌ಗಳನ್ನು ಬಳಸುವ ಅಂಶಗಳ ಬಗ್ಗೆ ಬಿಎಸ್‌ಎಫ್‌ಗೆ ತಿಳಿಸುವ ಸ್ಥಳೀಯರು ಅಥವಾ ಸಾರ್ವಜನಿಕರಿಗೆ ಇದೇ ರೀತಿಯ ಬಹುಮಾನವನ್ನುಏಪ್ರಿಲ್‌ನಲ್ಲಿ ಘೋಷಿಸಲಾಗಿತ್ತು ಎಂದು ಅವರು ತಿಳಿಸಿದರು.

ಈ ವರ್ಷ ಡಿಸೆಂಬರ್ 25ರವರೆಗೆ BSF 22 ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಇಲ್ಲಿಯವರೆಗೆ ನಿಯೋಜಿಸಲಾದ ಒಂದು ಡಜನ್‌ಗಿಂತಲೂ ಹೆಚ್ಚು 'ಹಿಟ್' ಅಥವಾ ಶೂಟಿಂಗ್ ತಂಡಗಳಿಗೆ ತಲಾ 1 ಲಕ್ಷ ರೂ.ಗಳ ಬಹುಮಾನವನ್ನು ಹಸ್ತಾಂತರಿಸಲಾಗಿದೆ ಎಂದರು.

ಈ ವರ್ಷ ಎಲ್ಲಾ 22 ಡ್ರೋನ್ ಹೊಡೆದುರುಳಿಸುವ ಪ್ರಕರಣಗಳು ಪಂಜಾಬ್ ಗಡಿಯಲ್ಲಿ ನಡೆದಿವೆ. 2020 ಮತ್ತು 2021ರಲ್ಲಿ ಪಂಜಾಬ್‌ ಮತ್ತು ಜಮ್ಮುವಿನಲ್ಲಿ ತಲಾ ಒಂದು ಡಜನ್ ಡ್ರೋನ್ ಗಳನ್ನು ಬಿಎಸ್‌ಎಫ್ ಹೊಡೆದುರುಳಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT