ದೇಶ

ಪುಲಿಟ್ಜರ್ ಪುರಸ್ಕೃತ ಕಾಶ್ಮೀರಿ ಫೋಟೋ ಜನರ್ಲಿಸ್ಟ್ ಗೆ ವಿಮಾನ ನಿಲ್ದಾಣದಲ್ಲಿ ತಡೆ 

Nagaraja AB

ನವದೆಹಲಿ: ಜಮ್ಮು ಕಾಶ್ಮೀರದ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಫೋಟೋ ಜನರ್ಲಿಸ್ಟ್ ಅವರು ವಿದೇಶಕ್ಕೆ ತೆರಳದಂತೆ ನವದೆಹಲಿಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಶನಿವಾರ ತಡೆದಿದ್ದಾರೆ.

ಸಾನಾ ಇರ್ಷಾದ್ ಮಟ್ಟೊ ಪುಸ್ತಕ ಬಿಡುಗಡೆ ಹಾಗೂ ಛಾಯಾ ಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೆಹಲಿಯಿಂದ ವಿಮಾನದಿಂದ ಪ್ಯಾರಿಸ್ ಗೆ ತೆರಳಬೇಕಿತ್ತು. ವಿಮಾನ ನಿಲ್ದಾಣದಲ್ಲಿ  ವಲಸೆ ಅಧಿಕಾರಿಗಳು ತಡೆದಿದ್ದಾರೆ. ಇದು ಒಟ್ಟಾರೇ ಅನಿರೀಕ್ಷಿತ ಘಟನೆಯಾಗಿದೆ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಫ್ರೆಂಚ್ ವೀಸಾ ಇದ್ದರೂ ದೆಹಲಿ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಡೆಹಿಡಿದಿದ್ದಾರೆ. ನನಗೆ ಯಾವುದೇ ಕಾರಣ ನೀಡಲಿಲ್ಲ. ಆದರೆ, ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ ಎಂದು ನನಗೆ ಹೇಳಲಾಯಿತು ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾದಲ್ಲಿ ಸಾನಾ ಇರ್ಷಾದ್ ಮಟ್ಟೊ ಅವರಿಗೆ ಬೆಂಬಲ ಸೂಚಿಸಿದ್ದಾರೆ. 

SCROLL FOR NEXT