ದೇಶ

INS ವಿಕ್ರಾಂತ್ 4ನೇ ಹಂತದ ಸಮುದ್ರ ಪ್ರಯೋಗ ಯಶಸ್ವಿ

Srinivas Rao BV

ನವದೆಹಲಿ: ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆ ವಿಕ್ರಾಂತ್ ನಾಲ್ಕನೇ ಹಂತದ ಸಮುದ್ರ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ವೇಳೆ ವಾಯುಯಾನ ಘಟಕಗಳು ಸೇರಿದಂತೆ ಪ್ರಮುಖ ಉಪಕರಣಗಳು ಮತ್ತು ವ್ಯವಸ್ಥೆಗಳ ಸಮುದ್ರ ಪ್ರಯೋಗಗಳನ್ನು ನಡೆಸಿದೆ ಎಂದು ನೌಕಾಪಡೆಯು ಟ್ವೀಟ್‌ನಲ್ಲಿ ಹೇಳಿದೆ.

"ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಅತಿದೊಡ್ಡ ಸ್ಥಳೀಯ ಯುದ್ಧನೌಕೆಯನ್ನು ತಲುಪಿಸುವ ನಿಟ್ಟಿನಲ್ಲಿ ದೇಶೀಯ ವಿಮಾನವಾಹಕ ನೌಕೆ ವಿಕ್ರಾಂತ್ ಕಾರ್ಯನಿರ್ವಹಣೆಯಲ್ಲಿ ಮತ್ತಷ್ಟು ವರ್ಧನೆಯೊಂದಿಗೆ ಕೈಗೊಂಡ ಪ್ರಮುಖ ಉಪಕರಣಗಳು ಮತ್ತು ವ್ಯವಸ್ಥೆಗಳ ಸಮಗ್ರ ಪ್ರಯೋಗಗಳ 4 ನೇ ಹಂತದ ಸಮುದ್ರ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ" ಎಂದು ನೌಕಾಪಡೆ 2 ಫೋಟೋಗಳೊಂದಿಗೆ ಟ್ವೀಟ್ ಮಾಡಿದೆ. ಒಂದು ಫೋಟೋವು ವಿಕ್ರಾಂತ್ ಅನ್ನು ದೂರದಿಂದ ತೋರಿಸುತ್ತದೆ ಮತ್ತು ಇನ್ನೊಂದು ಫೋಟೋದಲ್ಲಿ ನೌಕಾ ಧ್ರುವ ಹೆಲಿಕಾಪ್ಟರ್ ಫ್ಲೈಟ್ ಡೆಕ್ ಮೇಲೆ ಸುಳಿದಾಡುತ್ತಿದೆ. ಒಂದು MiG-29K ಫೈಟರ್ ಜೆಟ್ ಮತ್ತು Kamov Ka-31 ಹೆಲಿಕಾಪ್ಟರ್ ಕೂಡ ಫ್ಲೈಟ್ ಡೆಕ್‌ನಲ್ಲಿ ನಿಂತಿರುವುದು ಕಂಡುಬರುತ್ತದೆ.

ವಿಕ್ರಾಂತ್ ಸ್ವದೇಶಿ ವಿಮಾನವಾಹಕ ನೌಕೆಯಾಗಿದ್ದು ಭಾರತವು ಇದುವರೆಗೆ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಅತಿದೊಡ್ಡ ಮತ್ತು ಅತ್ಯಂತ ಸಂಕೀರ್ಣವಾದ ಯುದ್ಧನೌಕೆ. 1971 ರ ಯುದ್ಧದಲ್ಲಿ ಅದರ ಹೆಸರಾಂತ ಪ್ರಮುಖ ಪಾತ್ರದ 50 ವರ್ಷಗಳ ನಂತರ ಕಳೆದ ವರ್ಷ ಆಗಸ್ಟ್ ನಲ್ಲಿ ತನ್ನ ಮೊದಲ ಸಮುದ್ರ ಪ್ರಯೋಗಗಳನ್ನು ಪ್ರಾರಂಭಿಸಿತು.

ವಿಕ್ರಾಂತ್ ಸರಿಸುಮಾರು 24 ರಷ್ಯಾನಿರ್ಮಿತ MiG-29K ಫೈಟರ್ ಜೆಟ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಅದೇ ಯುದ್ಧವಿಮಾನಗಳನ್ನು ಈಗಾಗಲೇ INS ವಿಕ್ರಮಾದಿತ್ಯದಲ್ಲಿ ನಿಯೋಜಿಸಲಾಗಿದೆ. ಪ್ರಸ್ತುತ ನೌಕಾಪಡೆಯ ಏಕೈಕ ಕಾರ್ಯಾಚರಣೆಯ ವಿಮಾನವಾಹಕ ನೌಕೆಯಾಗಿದೆ.

SCROLL FOR NEXT