ದೇಶ

'ಕಾಳಿ' ಸಾಕ್ಷ್ಯಚಿತ್ರದ ನಿರ್ಮಾಪಕಿ ಲೀನಾ ಮಣಿಮೇಕಲೈಗೆ ಕೋರ್ಟ್ ಸಮನ್ಸ್

Lingaraj Badiger

ನವದೆಹಲಿ: ಕಾಳಿ ದೇವಿಯು ಸಿಗರೇಟ್ ಸೇದುತ್ತಿರುವ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಕಾಳಿ ಸಾಕ್ಷ್ಯಚಿತ್ರದ ನಿರ್ಮಾಪಕಿ ಲೀನಾ ಮಣಿಮೇಕಲೈ ಮತ್ತು ಇತರರಿಗೆ ದೆಹಲಿ ನ್ಯಾಯಾಲಯವು ಸೋಮವಾರ ಸಮನ್ಸ್ ಜಾರಿ ಮಾಡಿದೆ.

ಈ ಸಂಬಂಧದ ಪ್ರಕರಣದ ವಿಚಾರಣೆ ಆಗಸ್ಟ್ 6 ರಂದು ನಡೆಯಲಿದೆ ಎಂದು ನ್ಯಾಯಾಲಯ ಹೇಳಿದೆ.

ಮಣಿಮೇಕಲೈ ಅವರು ಹಿಂದೂ ದೇವತೆಯನ್ನು ಅಸಂಬದ್ಧ ರೀತಿಯಲ್ಲಿ ಚಿತ್ರಿಸಿದ್ದಕ್ಕಾಗಿ ಮತ್ತು ದೇವತೆ ಸಿಗರೇಟ್ ಸೇದುತ್ತಿರುವಂತೆ ಚಿತ್ರದ ಪೋಸ್ಟರ್ ಮತ್ತು ಪ್ರಚಾರದ ವೀಡಿಯೋವನ್ನು ಹಂಚಿಕೊಂಡಿದ್ದ ಕಾರಣ ಪ್ರಕರಣವನ್ನು ದಾಖಲಿಸಲಾಗಿದೆ.

ಫಿರ್ಯಾದಿದಾರರ ಪ್ರಕಾರ, ಚಿತ್ರದ ಪೋಸ್ಟರ್ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುತ್ತದೆ ಮತ್ತು ನೈತಿಕತೆ ಮತ್ತು ಸಭ್ಯತೆಯ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಇದಲ್ಲದೆ, ಪೋಸ್ಟರ್ ಅನ್ನು ಮಣಿಮೇಕಲೈ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಫಿರ್ಯಾದಿದಾರರು ಮಣಿಮೇಕಲೈ ಮತ್ತು ಇತರರ ವಿರುದ್ಧ ಶಾಶ್ವತ ಮತ್ತು ಕಡ್ಡಾಯ ತಡೆಯಾಜ್ಞೆ ಮೊಕದ್ದಮೆ ಹೂಡಿದ್ದಾರೆ.

SCROLL FOR NEXT