ಸಂಗ್ರಹ ಚಿತ್ರ 
ದೇಶ

ಅವಿವಾಹಿತ ಮಹಿಳೆಗೂ ಗರ್ಭಪಾತಕ್ಕೆ ಅವಕಾಶ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಮಹಿಳೆ ಅವಿವಾಹಿತೆ ಎಂಬ ಕಾರಣಕ್ಕೆ ಆಕೆಯ ಗರ್ಭಪಾತಕ್ಕೆ ಅವಕಾಶವನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ನವದೆಹಲಿ: ಮಹಿಳೆ ಅವಿವಾಹಿತೆ ಎಂಬ ಕಾರಣಕ್ಕೆ ಆಕೆಯ ಗರ್ಭಪಾತಕ್ಕೆ ಅವಕಾಶವನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಲಿವ್-ಇನ್ ಸಂಬಂಧದಿಂದ ಗರ್ಭಿಣಿಯಾಗಿದ್ದ ಅವಿವಾಹಿತ ಮಹಿಳೆಯೊಬ್ಬರು ತನಗೆ ಬೇಡವಾದ 24 ವಾರಗಳ ಭ್ರೂಣದ ಗರ್ಭಪಾತಕ್ಕೆ ಅವಕಾಶ ನೀಡುವಂತೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕೋರ್ಟ್ ಆಕೆಯ ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 

ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಮಹಿಳೆಯ ಗರ್ಭಪಾತಕ್ಕೆ ಅವಕಾಶ ನೀಡಿದ್ದು, ದೆಹಲಿಯ ಏಮ್ಸ್ ಮುಖ್ಯಸ್ಥರಿಗೆ ಸೂಚನೆ ನೀಡಿದ್ದು ವೈದ್ಯಕೀಯ ಮಂಡಳಿ ಸ್ಥಾಪಿಸಿ ಮಹಿಳೆಗೆ ಯಾವುದೇ ಅಪಾಯವಾಗದಂತೆ ಗರ್ಭಪಾತ ಮಾಡಿಸಲು ಸೂಚಿಸಿದೆ.

ವೈದ್ಯಕೀಯ ಗರ್ಭಪಾತ ಕಾಯ್ದೆಗೆ 2021ರಲ್ಲಿ ತಂದಿರುವ ತಿದ್ದುಪಡಿಯಲ್ಲಿ ಗಂಡ ಎಂಬ ಬದಲು ಸಂಗಾತಿ ಎಂಬ ಪದ ಬಳಸಲಾಗಿದೆ. ಇದು ಈ ಕಾಯ್ದೆಯಲ್ಲಿ ಅವಿವಾಹಿತ ಮಹಿಳೆಯನ್ನು ಕೂಡ ಒಳಗೊಳ್ಳಲು ಇರುವ ಶಾಸನದ ಉದ್ದೇಶವನ್ನು ತೋರಿಸುತ್ತದೆ ಎಂದು ಕೋರ್ಟ್ ಹೇಳಿದೆ. 

ಅವಿವಾಹಿತೆ ಎಂಬ ಕಾರಣಕ್ಕೆ ಅರ್ಜಿದಾರಳಿಗೆ ಈ ಪ್ರಯೋಜನವನ್ನು ನಿರಾಕರಿಸುವಂತಿಲ್ಲ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ತನಗೆ ಬೇಡವಾದ ಭ್ರೂಣವನ್ನು ವಿಧಿಯಿಲ್ಲದೆ ಅನುಭವಿಸುವಂತೆ ಒತ್ತಾಯಿಸುವುದು ಸಂಸದೀಯ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಕೋರ್ಟ್ ಹೇಳಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಫ್ ದೇಶಗಳ ಯಾವುದೇ ಬಂದರು ಸುರಕ್ಷಿತವಲ್ಲ; ಅಮೆರಿಕದ ಕ್ರಮ "ಕಡಲ್ಗಳ್ಳತನ"ಕ್ಕೆ ಸಮ: ಇರಾನ್ ಖಡಕ್ ವಾರ್ನಿಂಗ್

LPG Crisis: ಹೃದಯ ಶ್ರೀಮಂತಿಕೆ ಮೆರೆದ ಧ್ರುವ ಸರ್ಜಾ; ಆಟೋ ಚಾಲಕರಿಗೆ 25 ಲಕ್ಷ ರೂ. ನೆರವು - ಸರ್ಕಾರಕ್ಕೆ ಆಕ್ಷನ್‌ ಪ್ರಿನ್ಸ್‌ ಹೇಳಿದ್ದೇನು?

ಗರ್ಭಕೋಶವನ್ನೇ ಕೈಯಿಂದ ಕಿತ್ತು ಬಿಸಾಕೋಣ ಅನಿಸಿತ್ತು; ವಿಪರೀತ ಮೂಡ್ ಸ್ವಿಂಗ್ಸ್: 'ಆ' ದಿನಗಳ ಭೀಕರತೆ ಬಿಚ್ಚಿಟ್ಟ ನಟಿ ಐಶ್ವರ್ಯಾ!

Video: ಅಭಿಮಾನಿ ಎಸೆದ ಹೂವಿನ ಚೆಂಡನ್ನು ಬಾಂಬ್ ಎಂದು ಭಾವಿಸಿ ಹೆದರಿ ಓಡಿದ Thalapathy Vijay?

ಮಹಿಳಾ ಮೀಸಲಾತಿ ಕುರಿತ ಚರ್ಚೆ: ಏ.15 ಕ್ಕೆ ಎಲ್ಲಾ ವಿರೋಧ ಪಕ್ಷಗಳ ಸಭೆ- ಮಲ್ಲಿಕಾರ್ಜುನ ಖರ್ಗೆ

SCROLL FOR NEXT