ದೇಶ

ದೇಶದಲ್ಲಿ 4 ಕೋಟಿ ಅರ್ಹ ಫಲಾನುಭವಿಗಳು ಕೋವಿಡ್-19 ಲಸಿಕೆ ಪಡೆದಿಲ್ಲ: ಕೇಂದ್ರ ಸರ್ಕಾರ

Nagaraja AB

ನವದೆಹಲಿ: ಜುಲೈ 18ರವರೆಗೆ ಅಂದಾಜು 4 ಕೋಟಿ ಅರ್ಹ ಫಲಾನುಭವಿಗಳು ಕೋವಿಡ್-19 ಸಿಂಗಲ್ ಡೋಸ್ ಲಸಿಕೆ ಪಡೆದುಕೊಂಡಿಲ್ಲ ಎಂದು ಆರೋಗ್ಯ ಖಾತೆ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಜುಲೈ 18ರವರೆಗೆ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಒಟ್ಟು 1,78,38,52,566 ಲಸಿಕೆ ಡೋಸ್ ಗಳನ್ನು (ಶೇ.97.34) ಉಚಿತವಾಗಿ ನೀಡಲಾಗಿದೆ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಸಿಂಗಲ್ ಡೋಸ್ ತೆಗೆದುಕೊಳ್ಳದ ಜನರ ಸಂಖ್ಯೆ ಹಾಗೂ ಶೇಕಡಾವಾರು ಪ್ರಶ್ನೆಗೆ ಉತ್ತರಿಸಿದ ಅವರು, ಜುಲೈ 18ರ ಹೊತ್ತಿಗೆ ಅಂದಾಜು 4 ಕೋಟಿ ಅರ್ಹ ಫಲಾನುಭವಿಗಳು ಒಂದು ಡೋಸ್ ಲಸಿಕೆಯನ್ನು ಸಹ ತೆಗೆದುಕೊಂಡಿಲ್ಲ ಎಂದರು.

ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಫಲಾನುಭವಿಗಳಿಗೆ ಈ ವರ್ಚ್ ಮಾರ್ಚ್ 16 ರಿಂದ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಮತ್ತು 18-59 ವರ್ಷ ವಯಸ್ಸಿನವರಿಗೆ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಏಪ್ರಿಲ್ 10 ರಿಂದ ಮುನ್ನೆಚ್ಚರಿಕೆ ಡೋಸ್ ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಜುಲೈ 15 ರಿಂದ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮುನ್ನೆಚ್ಚರಿಕೆ ಡೋಸ್ ಗಳನ್ನು ನೀಡಲು ವಿಶೇಷ 75 ದಿನಗಳ ಅಭಿಯಾನ ಪ್ರಾರಂಭವಾಗಿದೆ. 

SCROLL FOR NEXT