ರಸ್ತೆ ಬದಿ ವ್ಯಾಪಾರಿಯ ಬಳಿ ಚೌಕಾಸಿ ಮಾಡುತ್ತಿರುವ ಕೇಂದ್ರ ಸಚಿವರು 
ದೇಶ

"15 ರೂಪಾಯಿ ಜೋಳ ಬಹಳ ದುಬಾರಿ": ಚೌಕಾಸಿ ಮಾಡಿದ ಕೇಂದ್ರ ಸಚಿವರ ಮೇಲೆ ಆಕ್ರೋಶ

ರಸ್ತೆ ಬದಿ ವ್ಯಾಪಾರಿಯ ಬಳಿ ಜೋಳದ ಬೆಲೆ ಕೇಳಿ ಇದು ತುಂಬಾ ದುಬಾರಿಯಾಯ್ತು ಎಂದ ಕೇಂದ್ರ ಸಚಿವರ ಮಾತು ಭಾರೀ ವಿರೋಧದ ಜೊತೆಗೆ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆ ಬದಿ ವ್ಯಾಪಾರಿಯ ಬಳಿ ಜೋಳದ ಬೆಲೆ ಕೇಳಿ ಇದು ತುಂಬಾ ದುಬಾರಿಯಾಯ್ತು ಎಂದ ಕೇಂದ್ರ ಸಚಿವರ ಮಾತು ಭಾರೀ ವಿರೋಧದ ಜೊತೆಗೆ ಆಕ್ರೋಶಕ್ಕೆ ಕಾರಣವಾಗಿದೆ.

ಕೇಂದ್ರ ಸಚಿವ ಫಗ್ಗನ್ ಸಿಂಗ್ ಕುಲಸ್ತೆ, ಮೂರು ಜೋಳದ ಪೀಸ್‌ಗಳಿಗೆ  45 ರೂಪಾಯಿ  ಪಾವತಿಸಬೇಕಾದಾಗ ಚೌಕಾಸಿ ಮಾಡಲು ಪ್ರಯತ್ನಿಸುತ್ತಿರುವುದು ಅವರು ಸ್ವತಃ ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಕಂಡುಬಂದಿದೆ.

ವಿಡಿಯೋದಲ್ಲಿ ಕೇಂದ್ರ ಸಚಿವ ಫಗ್ಗನ್ ಸಿಂಗ್ ಕುಲಸ್ತೆ ಜೋಳವನ್ನು ಹೇಗೆ ತಯಾರಿಸಬೇಕೆಂಬುದರ ಬಗ್ಗೆ ವಿವರವಾದ ಸೂಚನೆಗಳನ್ನು ಜೋಳ ಬೇಯಿಸುವವರಿಗೆ ನೀಡುತ್ತಿದ್ದಾರೆ.  ಆದರೆ ಜೋಳ ಮಾರಾಟಗಾರರು ಮೂರು ತುಂಡುಗಳಿಗೆ 45 ರೂಪಾಯಿ ಕೇಳಿದಾಗ ದಿಗ್ಭ್ರಮೆಗೊಂಡ ಸಚಿವರು  ಚೌಕಾಸಿ ಮಾಡಿದ್ದಾರೆ.

45 ರೂಪಾಯಿಯಾ? ಇದು ತುಂಬಾ ದುಬಾರಿಯಾಗಿದೆ ಎಂದು ಉಕ್ಕು ಸಚಿವಾಲಯದ ರಾಜ್ಯ ಸಚಿವ ಕುಲಾಸ್ತೆ ಹೇಳಿದರು. ಅದಕ್ಕೆ ಜೋಳ ಮಾರುವವರು ನಗುಮುಖದಿಂದ, “ಇದು ಸ್ಟಾಂಡರ್ಡ್ ದರ. ನೀವು ಕಾರಿನಲ್ಲಿ ಪ್ರಯಾಣಿಸುತ್ತಿದ್ದೀರಿ ಎಂಬ ಕಾರಣಕ್ಕೆ ನಾನು ಬೆಲೆ ಏರಿಕೆ ಮಾಡಿಲ್ಲ” ಎಂದು ಉತ್ತರಿಸಿದರು.

“ಇಂದು ಸಿಯೋನಿಯಿಂದ ಮಾಂಡ್ಲಾಗೆ ಹೋಗುತ್ತಿದ್ದೇನೆ. ಸ್ಥಳೀಯ ಜೋಳದ ರುಚಿ ನೋಡಿದೆವು. ನಾವೆಲ್ಲರೂ ಸ್ಥಳೀಯ ರೈತರು ಮತ್ತು ಅಂಗಡಿಯವರಿಂದ ಆಹಾರ ಪದಾರ್ಥಗಳನ್ನು ಖರೀದಿಸಬೇಕು. ಇದು ಅವರಿಗೆ ಉದ್ಯೋಗವನ್ನು ಮತ್ತು ಕಲಬೆರಕೆಯಿಲ್ಲದ ಸರಕುಗಳನ್ನು ಖಾತ್ರಿಗೊಳಿಸುತ್ತದೆ” ಎಂದು ಕುಲಸ್ತೆ ಗುರುವಾರ ಟ್ವೀಟ್ ಮಾಡಿದ್ದಾರೆ. ರಸ್ತೆ ಬದಿ ಮಾರಾಟಗಾರನ ಜತೆ ಸಚಿವರು ಚೌಕಾಸಿ ನಡೆಸುತ್ತಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.

“ಅವರು ಎಷ್ಟು ಬಡವರೆಂದರೆ, ಅವರಿಗೆ 15 ರೂಪಾಯಿಯ ಜೋಳದ ತುಂಡು  ತುಂಬಾ ದುಬಾರಿಯಾಗಿದೆ. ಇನ್ನು ಸಾಮಾನ್ಯ ನಾಗರಿಕರ ಪರಿಸ್ಥಿತಿಯನ್ನು ಯೋಚಿಸಿ ಎಂದು ಮಧ್ಯಪ್ರದೇಶ ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಅಧ್ಯಕ್ಷ ಕೆಕೆ ಮಿಶ್ರಾ ಟ್ವೀಟ್ ಮಾಡಿದ್ದಾರೆ.

ದೇಶವು ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿರುವ ಸಮಯದಲ್ಲಿ ಮತ್ತು ಜಿಎಸ್‌ಟಿ ದರಗಳ ಹೆಚ್ಚಳ ಮತ್ತು ರೂಪಾಯಿ ಮೌಲ್ಯದ ಕುಸಿತದ ವಿಷಯಗಳ ಬಗ್ಗೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಸಮಯದಲ್ಲಿ ಈ ವೀಡಿಯೊ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel