ದೇಶ

ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡಮತದಾನ: ಎಸ್ ಪಿ ಜೊತೆಗಿನ ಮೈತ್ರಿ ಕಡಿದುಕೊಂಡ ರಾಜ್ ಭರ್

Srinivasamurthy VN

ಲಖನೌ: ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿಯನ್ನು ಕೊನೆಗೊಳಿಸುವುದಾಗಿ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಪಿ ರಾಜ್‌ಭರ್ ಶನಿವಾರ ಘೋಷಿಸಿದ್ದಾರೆ.

ಈ ಹಿಂದೆ ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ ಭರ್ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಹದ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಸರ್ಕಾರ ಅವರಿಗೆ ವೈ ಕೆಟಗರಿ ಭದ್ರತೆ ಒದಗಿಸಿದ್ದು ಅವರ ಬಿಜೆಪಿ ಸಂಬಂಧ ಗಟ್ಟಿಯಾದ ಕುರಿತು ಚರ್ಚೆ ಹುಟ್ಟುಹಾಕಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಂಗ್ಯ ಮಾಡಿದ್ದ ಎಸ್ ಪಿ ಪಕ್ಷ, ರಾಜ್‌ಭರ್‌ "ಎಲ್ಲಿಗೆ ಬೇಕಾದರೂ ಹೋಗಲು ಸ್ವತಂತ್ರರು... ಪರವಾದ ಕೆಲಸ ಮಾಡಿದ ಬಳಿಕ ಅವರು "ಹೆಚ್ಚು ಗೌರವ ಪಡೆಯುತ್ತಿದ್ದಾರೆ" ಎಂದು ಟೀಕಿಸಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ರಾಜ್ ಭರ್ ಅವರು ಎಸ್ ಪಿ ಜೊತೆಗಿನ ಮೈತ್ರಿ ಕಡಿದುಕೊಂಡಿದೆ.

ಈ ಕುರಿತು ಮಾತನಾಡಿದ ರಾಜ್ ಭರ್ ಅವರು, 'ಎಸ್‌ಪಿಗೆ ಇಂದು ವಿಚ್ಛೇದನ ನೀಡಿದ್ದೇವೆ ಮತ್ತು ನಾವು ಅದನ್ನು ಒಪ್ಪಿಕೊಂಡಿದ್ದೇವೆ. ಬಿಎಸ್‌ಪಿ ನಮ್ಮ ಮೊದಲ ಆದ್ಯತೆಯಾಗಿದೆ. ನಾವು ದಲಿತರು ಮತ್ತು ಹಿಂದುಳಿದ ವರ್ಗಗಳಿಗಾಗಿ ಹೋರಾಡುತ್ತೇವೆ, ಅದನ್ನು ಮುಂದುವರಿಸುತ್ತೇವೆ. ನಾವು ಬಿಜೆಪಿ ಜೊತೆ ಹೋಗುವುದು ಅನಿವಾರ್ಯವಲ್ಲ.  ನಾನು ದಲಿತರು ಮತ್ತು ಹಿಂದುಳಿದ ವರ್ಗಗಳ ಹೋರಾಟಕ್ಕಾಗಿ ಅವರೊಂದಿಗೆ (ಅಖಿಲೇಶ್) ಕೈಜೋಡಿಸಿದ್ದೇನೆ. ನಾನು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದಾಗ ಅವರಿಗೆ ಕೆಟ್ಟದ್ದು ಅನಿಸಿದೆ. ಆದರೆ ಅಖಿಲೇಶ್ ಯಾದವ್ ಸಿಎಂ ಆದಿತ್ಯಾನಾಥ್ ರನ್ನು ಭೇಟಿ ಮಾಡಬಹುದು. 2024 ರ ವೇಳೆಗೆ ಎಲ್ಲವೂ ಸ್ಪಷ್ಟವಾಗುತ್ತದೆ  ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. .

ಬಹಿರಂಗ ಪತ್ರ ಬರೆದ ಎಸ್ ಪಿ
ಇನ್ನು ಸಮಾಜವಾದಿ ಪಕ್ಷವು ರಾಜ್‌ಭರ್‌ಗೆ ಪತ್ರ ಬರೆದಿದ್ದು, "ಎಸ್‌ಪಿ ನಿರಂತರವಾಗಿ ಬಿಜೆಪಿ ವಿರುದ್ಧ ಹೋರಾಡುತ್ತಿದೆ. ನೀವು ಬಿಜೆಪಿಯೊಂದಿಗೆ ಶಾಮೀಲಾಗಿ ಅವರನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದೀರಿ, ಬೇರೆಡೆ ನಿಮಗೆ ಗೌರವ ಸಿಗುತ್ತದೆ ಎಂದು ನೀವು ಭಾವಿಸಿದರೆ, ನೀವು ಬಿಡಲು ಸ್ವತಂತ್ರರು" ಎಂದು ಹೇಳಿದೆ.
 
'ತತ್ವಗಳ ಮೇಲಿನ ರಾಜಿ ಸ್ವೀಕಾರಾರ್ಹವಲ್ಲ' ಎಂದ ಶಿವಪಾಲ್ 
ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶಿವಪಾಲ್, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ರಾಜ್ ಭರ್ ಅವರು "ಯಾವಾಗಲೂ ಮುಕ್ತ".. ರಾಜಕೀಯ ಪ್ರಯಾಣದಲ್ಲಿ ತತ್ವಗಳ ರಾಜಿ "ಸ್ವೀಕಾರಾರ್ಹವಲ್ಲ".. ನಾನು ಹೇಗಾದರೂ ಯಾವಾಗಲೂ ಮುಕ್ತನಾಗಿದ್ದೆ, ಆದರೆ ಪತ್ರವನ್ನು ನೀಡುವ ಮೂಲಕ ನನಗೆ ಔಪಚಾರಿಕ ಸ್ವಾತಂತ್ರ್ಯವನ್ನು ನೀಡಿದ ಸಮಾಜವಾದಿ ಪಕ್ಷಕ್ಕೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ. ರಾಜಕೀಯ ಪ್ರಯಾಣದಲ್ಲಿ ತತ್ವಗಳು ಮತ್ತು ಗೌರವದ ಮೇಲೆ ರಾಜಿ ಮಾಡಿಕೊಳ್ಳುವುದು ಸ್ವೀಕಾರಾರ್ಹವಲ್ಲ" ಎಂದು ಶಿವಪಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಈ ತಿಂಗಳ ಆರಂಭದಲ್ಲಿ, ರಾಜ್‌ಭರ್ ಮತ್ತು ಶಿವಪಾಲ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದರು, ಇದು ಸಮಾಜವಾದಿ ಪಕ್ಷವನ್ನು ಕೆರಳಿಸಿತು. ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಬದಲಿಗೆ ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಇಬ್ಬರೂ ನಾಯಕರು ಘೋಷಿಸಿದಾಗ ಮೈತ್ರಿಯೊಳಗೆ ಬಿರುಕುಗಳು ಮತ್ತಷ್ಟು ಹೆಚ್ಚಾದವು. 

SCROLL FOR NEXT