ದೇಶ

ಇದೇ ವರ್ಷ ಮುಂಬೈ, ಥಾಣೆಯಲ್ಲಿ 62 ಹಂದಿ ಜ್ವರ ಪ್ರಕರಣ ಪತ್ತೆ 

Nagaraja AB

ಮುಂಬೈ: ಮಹಾರಾಷ್ಟ್ರದ ಮುಂಬೈ, ಠಾಣೆ, ಫಲ್ಗರ್ ಮತ್ತು ರಾಯಗಢ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇಲ್ಲಿಯವರೆಗೂ 62 ಹಂದಿ ಜ್ವರ ಪ್ರಕರಣಗಳು ಪತ್ತೆಯಾಗಿರುವುದಾಗಿ ಆರೋಗ್ಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಜನವರಿಯಿಂದ ಜುಲೈ 24ರವರೆಗೂ ಒಟ್ಟು 1,66,13 ಜನರನ್ನು ತಪಾಸಣೆ ನಡೆಸಲಾಗಿದ್ದು, ಈ ಪೈಕಿ 62 ಜನರಲ್ಲಿ ಹೆಚ್ 1ಎನ್ 1 ಸೋಂಕು ಪತ್ತೆಯಾಗಿದೆ ಎಂದು ಮುಂಬೈ ಆರೋಗ್ಯ ಸೇವಾ ವಿಭಾಗದ ಉಪ ನಿರ್ದೇಶಕ ಡಾ. ಗೌರಿ ರಾಥೋಡ್ ಮಾಹಿತಿ ನೀಡಿದ್ದಾರೆ.

ಕಳೆದ ವಾರ ಸೋಂಕಿನಿಂದ ಥಾಣೆಯಲ್ಲಿ ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ. ಈ ವರ್ಷ ಹೆಚ್ 1 ಎನ್ 1 ಸೋಂಕಿನಿಂದ ಮುಂಬೈ ವಲಯದಲ್ಲಿ ಸಂಭವಿಸಿದ ಮೊದಲ ಸಾವು ಇದಾಗಿದೆ. ಪ್ರಸ್ತುತ ಪರಿಸ್ಥಿತಿ ಮೇಲೆ ನಿಗಾ ಇಡಲಾಗಿತ್ತು, ಸೋಂಕು ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸುವಂತೆ ನಾಗರಿಕರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. 

SCROLL FOR NEXT