ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪಬ್ ನಲ್ಲಿ ಮಹಿಳೆಯರಿಂದ ವ್ಯಕ್ತಿಯೊಬ್ಬನ ಮೇಲೆ ತೀವ್ರ ಥಳಿತ: ವಿಡಿಯೋ ವೈರಲ್

ಲಖನೌ ಕೆಲವು ವಾರಗಳಿಂದ ವಿವಾದದ ಕೇಂದ್ರ ಬಿಂದುವಾಗಿದೆ. ಲುಲು ಮಾಲ್ ನೊಳಗೆ ಜನರು ಪ್ರಾರ್ಥನೆ ಸಲ್ಲಿಸುತ್ತಿರುವ ವೈರಲ್ ವೀಡಿಯೊದಿಂದ ಹಿಡಿದು ಸಾಕಷ್ಟು ಘಟನೆಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಹಲ್ಲೆಯ ದೃಶ್ಯ
Vishwanath S
Updated On : 25 Jul 2022, 6:10 pm

ಲಖನೌ: ಲಖನೌ ಕೆಲವು ವಾರಗಳಿಂದ ವಿವಾದದ ಕೇಂದ್ರ ಬಿಂದುವಾಗಿದೆ. ಲುಲು ಮಾಲ್ ನೊಳಗೆ ಜನರು ಪ್ರಾರ್ಥನೆ ಸಲ್ಲಿಸುತ್ತಿರುವ ವೈರಲ್ ವೀಡಿಯೊದಿಂದ ಹಿಡಿದು ಸಾಕಷ್ಟು ಘಟನೆಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಇದೀಗ ಪಬ್ ನ ಮುಂದೆ ನಡೆದ ಜಗಳದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಬೆಚ್ಚಿ ಬೀಳುವಂತೆ ಮಾಡಿದೆ.

ವಿಭೂತಿಖಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಲಖನೌದ ಅನ್‌ಪ್ಲಗ್ಡ್ ಕೆಫೆಯಲ್ಲಿ ಈ ಘಟನೆ ನಡೆದಿದೆ. ಕ್ಲಿಪ್‌ನಲ್ಲಿ, ಇಬ್ಬರು ಮಹಿಳೆಯರು ಪಬ್ ನ ಮುಂದೆ ಪುರುಷನನ್ನು ಥಳಿಸುವುದು ಕಂಡುಬರುತ್ತದೆ.

Advertisement

Advertisement

ಪುರುಷನು ಮಾತನಾಡಲು ಪ್ರಯತ್ನಿಸುತ್ತಿರುವಾಗ, ಒಬ್ಬ ಮಹಿಳೆ ಹೂವಿನ ಕುಂಡವನ್ನು ಎತ್ತಿಕೊಂಡು ಪುರುಷನ ಬೆನ್ನಿನ ಹಿಂದೆ ಓಡುವುದನ್ನು ಕಾಣಬಹುದು.

ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಮನಗಂಡ ಪಕ್ಕದಲ್ಲಿ ನಿಂತಿದ್ದ ಬೌನ್ಸರ್ ಗಳು ಮಧ್ಯಪ್ರವೇಶಿಸಿ ಹೊಡೆದಾಟವನ್ನು ತಡೆಗಟ್ಟಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement