ಬಿಜೆಪಿ ನಾಯಕ ಬರ್ನಾಡ್ ಎನ್ ಮರಕ್ ಬಂಧನ 
ದೇಶ

ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ; ಮೇಘಾಲಯ ಬಿಜೆಪಿ ನಾಯಕ ಬರ್ನಾಡ್ ಎನ್ ಮರಕ್ ಬಂಧನ

ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮೇಘಾಲಯ ಬಿಜೆಪಿಯ ಉಪಾಧ್ಯಕ್ಷ ಬರ್ನಾಡ್ ಎನ್ ಮರಕ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಹಾಪುರ್: ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮೇಘಾಲಯ ಬಿಜೆಪಿಯ ಉಪಾಧ್ಯಕ್ಷ ಬರ್ನಾಡ್ ಎನ್ ಮರಕ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಮೇಘಾಲಯದ ತುರಾದಲ್ಲಿರುವ ತನ್ನ ಫಾರ್ಮ್‌ಹೌಸ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಅವರ ಮೇಲೆ ಪ್ರಕರಣ ದಾಖಲಿಸಿದ್ದರು. ಬಳಿಕ ನಾಪತ್ತೆಯಾಗಿದ್ದ ಮರಕ್ ರನ್ನು ಇಂದು ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಶನಿವಾರ ನಡೆದ ದಾಳಿಯ ವೇಳೆ ಆರು ಅಪ್ರಾಪ್ತರನ್ನು ರಕ್ಷಿಸಿ, 73 ಜನರನ್ನು ಅವರ ಫಾರ್ಮ್‌ಹೌಸ್ ‘ರಿಂಪು ಬಾಗನ್’ ನಿಂದ ಬಂಧಿಸಿದ ನಂತರ ಮಾರಕ್ ಪರಾರಿಯಾಗಿದ್ದರು. ತನಿಖೆಯಲ್ಲಿ ಸಹಕರಿಸುವಂತೆ ಮಾರಾಕ್ ಅವರನ್ನು ಕೇಳಲಾಗಿತ್ತು. ಆದರೆ ತನಿಖಾಧಿಕಾರಿಗಳಿಂದ ತಪ್ಪಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೇಘಾಲಯ ಪೊಲೀಸರು ಬಿಜೆಪಿ ನಾಯಕನಿಗೆ ಲುಕ್‌ಔಟ್ ನೋಟಿಸ್ ನೀಡಿದ ಕೆಲವೇ ಗಂಟೆಗಳ ನಂತರ ಬಂಧನವಾಗಿದೆ. ನಿನ್ನೆ ತುರಾ ನ್ಯಾಯಾಲಯವು ಬಿಜೆಪಿ ನಾಯಕನ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.

ತುರಾದಲ್ಲಿನ ಮರಕ್ ಒಡೆತನದ ರೆಸಾರ್ಟ್‌ನಲ್ಲಿ ಬಂಧನದಲ್ಲಿದ್ದ ಐವರು ಮಕ್ಕಳನ್ನು ಶನಿವಾರ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೇಶ್ಯಾಗೃಹ ನಡೆಸ್ತಿದ್ದ ಆ ಸ್ಥಳದಿಂದ ದಾಳಿಯ ವೇಳೆ 47 ಯುವಕರು ಮತ್ತು 26 ಮಹಿಳೆಯರನ್ನು ಬಂಧಿಸಲಾಗಿದೆ. ದಾಳಿಯ ವೇಳೆ  ಅಪಾರ ಪ್ರಮಾಣದ ಮದ್ಯ, ಸುಮಾರು 500 ಗರ್ಭನಿರೋಧಕ ಪ್ಯಾಕೆಟ್‌ಗಳು, ಸೆಲ್‌ಫೋನ್‌ಗಳು ಮತ್ತು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಎಲ್‌ಆರ್ ಬಿಷ್ಣೋಯ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಬಿ- ರಿಪೋರ್ಟ್, ಜ. 22ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ!

ಕುರ್ಚಿ ಕಾಳಗ: ಸಿದ್ದರಾಮಯ್ಯ, ಡಿಕೆಶಿ ಜತೆ ರಾಹಲ್ ಗಾಂಧಿ ಪ್ರತ್ಯೇಕ ಚರ್ಚೆ; ಕುತೂಹಲ ಮೂಡಿಸಿದೆ ಚುಟುಕು ಮಾತುಕತೆ! Video

ಇರಾನ್ ಪ್ರತಿಭಟನೆಯಲ್ಲಿ 2000 ಜನ ಸಾವು; ಇದಕ್ಕೆ ಉಗ್ರರು ಕಾರಣ ಎಂದ ಅಧಿಕಾರಿಗಳು

ತುಮಕೂರು ಕ್ರೀಡಾಂಗಣದಿಂದ ಗಾಂಧಿ ಹೆಸರು ತೆರವು- ಬಿಜೆಪಿ ಆರೋಪ; ಜಿ ಪರಮೇಶ್ವರ ಪ್ರತಿಕ್ರಿಯೆ ಏನು? Video

ಫಿನಾಲೆ ಹಂತಕ್ಕೆ 'ಬಿಗ್‌ಬಾಸ್‌ ಕನ್ನಡ' 12; ಎಲ್ಲೆಲ್ಲೂ ಗಿಲ್ಲಿ ನಟನ ಹಾವಳಿ! ಗೆಲ್ಲುವ ಅದೃಷ್ಟ ಯಾರಿಗಿದೆ?

SCROLL FOR NEXT