ಮೇಘಾಲಯ: ಕಾಂಗ್ರೆಸ್ ಗೆ ಶಾಕ್; ಪಕ್ಷದ ಎಲ್ಲಾ 5 ಶಾಸಕರು ಬಿಜೆಪಿ ಬೆಂಬಲಿತ ಎಂಡಿಎ ಗೆ ಸೇರ್ಪಡೆ
ಚುನಾವಣೆಗೆ ಸಜ್ಜಾಗುತ್ತಿರುವ ಮೇಘಾಲಯ ರಾಜ್ಯದಲ್ಲಿ ಕಾಂಗ್ರೆಸ್ ಗೆ ಅಘಾತ ಉಂಟಾಗಿದ್ದು ಪಕ್ಷದ ಎಲ್ಲಾ 5 ಶಾಸಕರು ಬಿಜೆಪಿ ಬೆಂಬಲಿತ ಎಂಡಿಎಗೆ ಸೇರ್ಪಡೆಯಾಗಿದ್ದಾರೆ.
Published: 09th February 2022 12:50 AM | Last Updated: 09th February 2022 11:07 PM | A+A A-

ಕಾಂಗ್ರೆಸ್
ಮೇಘಾಲಯ: ಮೇಘಾಲಯ ರಾಜ್ಯದಲ್ಲಿ ಕಾಂಗ್ರೆಸ್ ಗೆ ಅಘಾತ ಉಂಟಾಗಿದ್ದು ಪಕ್ಷದ ಎಲ್ಲಾ 5 ಶಾಸಕರು ಬಿಜೆಪಿ ಬೆಂಬಲಿತ ಎಂಡಿಎಗೆ ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆಯಿಂದ ರಾಜ್ಯದಲ್ಲಿ ವಿಪಕ್ಷ ಸ್ಥಾನವನ್ನು ಕಾಂಗ್ರೆಸ್ ಕಳೆದುಕೊಂಡಿದ್ದು, ಟಿಎಂಸಿ ವಿಪಕ್ಷ ಸ್ಥಾನವನ್ನು ಪಡೆದುಕೊಂಡಿದೆ.
17 ಶಾಸಕರು ಇದ್ದ ಕಾಂಗ್ರೆಸ್ ಪಕ್ಷ ಪ್ರಧಾನ ವಿಪಕ್ಷವಾಗಿತ್ತು. ಕಳೆದ ವರ್ಷ ಮಾಜಿ ಸಿಎಂ ಮುಕುಲ್ ಸಂಗ್ಮಾ ಸೇರಿದಂತೆ 12 ಶಾಸಕರು ಟಿಎಂಸಿಗೆ ಸೇರಿದ ಬಳಿಕ ಕಾಂಗ್ರೆಸ್ ನಲ್ಲಿ ಐವರು ಶಾಸಕರು ಉಳಿದಿದ್ದರು.
ಸಿಎಲ್ ಪಿ ಅಧಿಕೃತವಾಗಿ ಮುಖ್ಯಮಂತ್ರಿ ಕೊನ್ರಾಡ್ ಕೆ ಸಂಗ್ಮಾ ಅವರಿಗೆ ಬೆಂಬಲ ಪತ್ರವನ್ನು ತಲುಪಿಸಿದೆ. "ಐಎನ್ ಸಿ ಯ ಶಾಸಕರು 2022 ರ ಫೆಬ್ರವರಿ 8 ರಂದು ಎಂಡಿಎ ಸರ್ಕಾರವನ್ನು ಸೇರಿದ್ದೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.