ದೇಶ

ಪ್ರತಿಪಕ್ಷಗಳು ದೇಶಕ್ಕಿಂತಲೂ ರಾಜಕೀಯ ಹಿತಾಸಕ್ತಿಗೆ ಆದ್ಯತೆ ನೀಡುತ್ತಿವೆ: ಪ್ರಧಾನಿ ಮೋದಿ

Nagaraja AB

ಕಾನ್ಫುರ: ಪ್ರತಿಪಕ್ಷಗಳು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದು,  ಸಮಾಜ ಮತ್ತು ದೇಶಕ್ಕಿಂತಲೂ ಹೆಚ್ಚಾಗಿ ತಮ್ಮ ರಾಜಕೀಯ ಹಿತಾಸಕ್ತಿಗೆ ಆದ್ಯತೆ ನೀಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಸಮಾಜವಾದಿ ಪಕ್ಷದ ಮಾಜಿ ರಾಜ್ಯಸಭಾ ಸದಸ್ಯ ಹರ್ ಮೋಹನ್ ಸಿಂಗ್ ಯಾದವ್ ಅವರ 10ನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ವರ್ಚುಯಲ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ತಾವು ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ನಿರ್ಧಾರಗಳನ್ನು ಅನುಷ್ಠಾನಗೊಳಿಸದ ಪ್ರತಿಪಕ್ಷಗಳು, ಅನೇಕ ಸಂದರ್ಭಗಳಲ್ಲಿ ಸರ್ಕಾರದ  ಕೆಲಸಗಳಿಗೆ ಅಡ್ಡಿಪಡಿಸುತ್ತಿವೆ ಎಂದರು.

ಇದೀಗ ಒಂದು ವೇಳೆ ಅವರ ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ ಅವರು ವಿರೋಧಿಸುತ್ತಾರಾ ಎಂದು ಕೇಳಿದ ಪ್ರಧಾನಿ, ದೇಶದ ಜನರು ಇದನ್ನು ಇಷ್ಟಪಡುವುದಿಲ್ಲ ಎಂದರು.

ಪಕ್ಷಕ್ಕಿಂತಲೂ ದೇಶ ಮೊದಲು ಎಂಬ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾತನ್ನು ನೆನಪಿಸಿಕೊಂಡ ಮೋದಿ, ಪ್ರಜಾಪ್ರಭುತ್ವದಿಂದ ಪಕ್ಷಗಳು ಅಸ್ವಿತ್ವದಲ್ಲಿವೆ, ದೇಶ ಇರುವುದರಿಂದ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ. ನಮ್ಮ ದೇಶದ ಬಹುತೇಕ ಪಕ್ಷಗಳು ವಿಶೇಷವಾಗಿ ಕಾಂಗ್ರೆಸ್ ಯೇತರ ಎಲ್ಲಾ ಪಕ್ಷಗಳು ಈ ಐಡಿಯಾವನ್ನು ಪಾಲಿಸಬೇಕು ಎಂದರು. 

SCROLL FOR NEXT