ನವ ದಂಪತಿ ಹತ್ಯೆ 
ದೇಶ

ಕುಟುಂಬವನ್ನು ವಿರೋಧಿಸಿ ಮದುವೆ: ಮಗಳು, ಅಳಿಯನನ್ನು ಕಡಿದು ಕೊಂದು ಪೊಲೀಸರಿಗೆ ಶರಣಾದ ತಂದೆ!

ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ನವವಿವಾಹಿತ ದಂಪತಿಯನ್ನು ಯುವತಿಯ ತಂದೆ ಕಡಿದು ಕೊಂದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಚೆನ್ನೈ: ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ನವವಿವಾಹಿತ ದಂಪತಿಯನ್ನು ಯುವತಿಯ ತಂದೆ ಕಡಿದು ಕೊಂದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕಾಗಿ ಆಕೆಯ ಬಗ್ಗೆ ಅಸಮಾಧಾನ ಹೊಂದಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತೂತುಕುಡಿ ಜಿಲ್ಲೆಯ ಬಂದರು ನಗರವಾದ ಟುಟಿಕೋರಿನ್‌ನಲ್ಲಿ ಘಟನೆ ನಡೆದಿದೆ.

ಯುವತಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ ನಂತರ ಮಧುರೈನಲ್ಲಿ ಪೊಲೀಸರ ಮುಂದೆ ಹಾಜರಾದ ನವಜೋಡಿ ನಾವಿಬ್ಬರೂ ವಯಸ್ಕರು. ನಾನೇ ಸ್ವಇಚ್ಛೆಯಿಂದ ಮದುವೆಯಾಗಿದ್ದೇವೆಂದು ಪೊಲೀಸರ ಮುಂದೆ ಹೇಳಿದರು.   ಇಷ್ಟೇ ಅಲ್ಲದೇ ಯುವತಿ ತನ್ನ ಪೋಷಕರೊಂದಿಗೆ ವೀಡಿಯೊ ಕಾಲ್ ನಲ್ಲಿ ಪೊಲೀಸ್ ಸ್ಟೇಷನ್ ನಿಂದಲೇ ಮಾತನಾಡಿದರು. ನವದಂಪತಿ ಎಂದಿಗೂ ಪೊಲೀಸ್ ರಕ್ಷಣೆಯನ್ನು ಕೋರಲಿಲ್ಲ ಎಂದು ಟುಟಿಕೋರಿನ್‌ನ ಹಿರಿಯ ಪೋಲೀಸ್ ಬಾಲಾಜಿ ಸರವಣನ್ ತಿಳಿಸಿದ್ದಾರೆ.

ಗ್ರಾಮದ ಹಿರಿಯರೂ ಮಧ್ಯಪ್ರವೇಶಿಸಿ ಹೊಸಜೋಡಿಗೆ ತೊಂದರೆಕೊಡದಂತೆ ಯುವತಿ ಕುಟುಂಬಕ್ಕೆ ಮನವಿ ಮಾಡಿದ್ದರು.  ದಂಪತಿಯನ್ನು ಅವರ ಬಾಡಿಗೆ ಮನೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಹತ್ಯೆ ಬಳಿಕ ಯುವತಿಯ ತಂದೆ ಪೊಲೀಸರ ಮುಂದೆ ಶರಣಾಗಿದ್ದಾರೆ.

ದಂಪತಿಗಳು ಒಂದೇ ಪರಿಶಿಷ್ಟ ಜಾತಿಗೆ ಸೇರಿದವರು ಮತ್ತು ಸಂಬಂಧಿಗಳಾಗಿದ್ದರು. ಯುವತಿ ಕಾಲೇಜು ವಿದ್ಯಾರ್ಥಿನಿಯಾಗಿದ್ದು ಆಕೆಯ ಪತಿ ಶಾಲಾ ವಿದ್ಯಾಭ್ಯಾಸದ ನಂತರ ಓದಿರಲಿಲ್ಲ.  ಇದು ಮಹಿಳೆಯ ಕುಟುಂಬಕ್ಕೆ ಪ್ರಮುಖ ಸಮಸ್ಯೆಯಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel