ಅಯೋಧ್ಯೆಯ ರಾಮ ಮಂದಿರದ ಮಾದರಿ 
ದೇಶ

ಮುಂದಿನ ತಿಂಗಳು ಅಯೋಧ್ಯೆ ರಾಮ ಮಂದಿರದ ಪ್ಲಿಂತ್ ನಿರ್ಮಾಣ ಪೂರ್ಣ

ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದ ಪ್ಲಿಂತ್ ಆಗಸ್ಟ್‌ನಲ್ಲಿ ಪೂರ್ಣಗೊಳ್ಳಲಿದ್ದು, ಗರ್ಭಗುಡಿಯಲ್ಲಿ ಕೆತ್ತಿದ ಕಲ್ಲುಗಳಿಂದ ಮಾಡಲಾಗುತ್ತಿರುವ ಪರಿಕ್ರಮ ಪಥದ(ಪ್ರದಕ್ಷಿಣೆ ಪಥ) ಶೇಕಡಾ 30-40 ರಷ್ಟು ಕೆಲಸಗಳು ಆಗಸ್ಟ್‌ನಲ್ಲಿ...

ಲಖನೌ: ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದ ಪ್ಲಿಂತ್ ಆಗಸ್ಟ್‌ನಲ್ಲಿ ಪೂರ್ಣಗೊಳ್ಳಲಿದ್ದು, ಗರ್ಭಗುಡಿಯಲ್ಲಿ ಕೆತ್ತಿದ ಕಲ್ಲುಗಳಿಂದ ಮಾಡಲಾಗುತ್ತಿರುವ ಪರಿಕ್ರಮ ಪಥದ(ಪ್ರದಕ್ಷಿಣೆ ಪಥ) ಶೇಕಡಾ 30-40 ರಷ್ಟು ಕೆಲಸಗಳು ಆಗಸ್ಟ್‌ನಲ್ಲಿ ಪೂರ್ಣಗೊಳ್ಳಲಿವೆ.

ದೇವಾಲಯದ ನಿರ್ಮಾಣ ಕಾರ್ಯದ ಬಗ್ಗೆ ವಿವರಗಳನ್ನು ಹಂಚಿಕೊಂಡ ದೇವಾಲಯ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು, ಪ್ಲಿಂತ್ ನ ಮುಕ್ಕಾಲು ಭಾಗದಷ್ಟು ಕೆಲಸ ಪೂರ್ಣಗೊಂಡಿದೆ. ಪ್ಲಿಂತ್ ಕಾಮಗಾರಿ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದರೊಂದಿಗೆ ಗರ್ಭಗುಡಿಯ ಕಾಮಗಾರಿಯೂ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಕಳೆದ ಎರಡು ತಿಂಗಳಲ್ಲಿ ಬನ್ಸಿ ಪಹಾರ್‌ಪುರದಿಂದ 200ಕ್ಕೂ ಹೆಚ್ಚು ಕೆತ್ತನೆಯ ಗುಲಾಬಿ ಕಲ್ಲುಗಳನ್ನು ತಂದು ಸ್ಥಾಪಿಸಲಾಗಿದೆ. ಗರ್ಭಗುಡಿಯ ಪಶ್ಚಿಮ ಭಾಗದಲ್ಲಿರುವ ಪರಿಕ್ರಮ ಪಥ ಶೀಘ್ರದಲ್ಲಿಯೇ ಸಂಪೂರ್ಣ ಸಿದ್ಧವಾಗಲಿದೆ’ ಎಂದು ಚಂಪತ್ ರೈ ತಿಳಿಸಿದ್ದಾರೆ.

ರಾಮಜನ್ಮಭೂಮಿ ಸಂಕೀರ್ಣದಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯವನ್ನು ದೇವಾಲಯದ ಟ್ರಸ್ಟ್ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಇದಲ್ಲದೆ, ಮಾಜಿ ಐಎಎಸ್ ಅಧಿಕಾರಿ ನೃಪೇಂದ್ರ ಮಿಶ್ರಾ ನೇತೃತ್ವದ ನಿರ್ಮಾಣ ಸಮಿತಿಯು ಗರ್ಭಗುಡಿಯಲ್ಲಿನ ಸ್ತಂಭಗಳ ದಪ್ಪವನ್ನು ಮೂರು ಇಂಚುಗಳಷ್ಟು ಹೆಚ್ಚಿಸಲು ನಿರ್ಧರಿಸಿದೆ. ಅವು ದೇವಾಲಯದ ಬಾರವನ್ನು ತಡೆದುಕೊಳ್ಳುತ್ತವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT