ದೇಶ

ಭ್ರಷ್ಟಾಚಾರವನ್ನು ಬೆಂಬಲಿಸಿ ಕಾಂಗ್ರೆಸ್ ಪ್ರತಿಭಟನೆ: ಬಿಜೆಪಿ ನಾಯಕರ ತಿರುಗೇಟು

Lingaraj Badiger

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೆಹಲಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದು, ಇದನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

ಈ ಕುರಿತು ಮಾತನಾಡಿದ ಬಿಜೆಪಿ ನಾಯಕಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸುವ ಮೂಲಕ ಭ್ರಷ್ಟಾಚಾರದ ಬೆಂಬಲಕ್ಕೆ ನಿಂತಿದೆ. ಜೈಲಿನಿಂದ ಜಾಮೀನಿನ ಮೇಲೆ ಬಂದವರು ದೆಹಲಿ ಸುತ್ತುವರೆಯಲು ಬನ್ನಿ ಎಂದು ಘೋಷಿಸಿದ್ದಾರೆ. ತನಿಖಾ ಸಂಸ್ಥೆಯ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಆಡಳಿತದ ಸಚಿವರನ್ನು ಆಹ್ವಾನಿಸಲಾಗಿದೆ. ಏಜೆನ್ಸಿಯ ಮೇಲೆ ಈ ರೀತಿ ಒತ್ತಡಕ್ಕೆ ನೀವು ಯಾವ ಹೆಸರನ್ನು ನೀಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಯಾರೂ ಸಹ ಕಾನೂನಿಗಿಂತ ದೊಡ್ಡವರಲ್ಲ, ರಾಹುಲ್ ಗಾಂಧಿ ಕೂಡ ಎಂದು ಕೇಂದ್ರ ಸಚಿವೆ ಹೇಳಿದ್ದಾರೆ.

ಇನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕುರಿತು ಮಾತನಾಡಿದ ಬಿಜೆಪಿ ನಾಯಕ ಸಂಬಿತ್ ಪಾತ್ರ ಅವರು, “ಕಾಂಗ್ರೆಸ್ ಇಂದು ಮಾಡುತ್ತಿರುವುದು ‘ಜಶ್ನ್-ಎ-ಭ್ರಷ್ಟಾಚಾರ್’– ಭ್ರಷ್ಟಾಚಾರವನ್ನು ಸಂಭ್ರಮಿಸುತ್ತಿದೆ. ಭ್ರಷ್ಟಾಚಾರದ ಮೆಟ್ಟಿಲೇರಿರುವ ರಾಹುಲ್ ಗಾಂಧಿ ಮಾಡ್ಯೂಲ್ ಅನ್ನು ಪ್ರಾರಂಭಿಸಲು ಕಾಂಗ್ರೆಸ್ ಮತ್ತೆ ಪ್ರಯತ್ನಿಸಿದೆ. ಆದರೆ ಇದರಲ್ಲಿ ಅವರು ಮತ್ತೆ ವಿಫಲರಾಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಭ್ರಷ್ಟಾಚಾರದ ಪರವಾಗಿ ಸತ್ಯಾಗ್ರಹ ಮಾಡುತ್ತಿರುವುದನ್ನು ಜಗತ್ತು ಗಮನಿಸುತ್ತಿದೆ. ಮಹಾತ್ಮಾ ಗಾಂಧಿ ಜಗತ್ತಿಗೆ ಸತ್ಯಕ್ಕಾಗಿ ಹೋರಾಡಲು ಕಲಿಸಿದರೆ, ಕಾಂಗ್ರೆಸ್ ಜಗತ್ತಿಗೆ ಭ್ರಷ್ಟಾಚಾರವನ್ನು ಆಚರಿಸಲು ಮತ್ತು ಅದಕ್ಕಾಗಿ ಹೋರಾಡಲು ಕಲಿಸಿದೆ. ಗಾಂಧಿ ಕುಟುಂಬ ಜಾಮೀನಿನ ಮೇಲೆ ಹೊರಗಿದೆ. ಇದು ರಾಜಕೀಯ ವಿಷಯವಲ್ಲ ಎಂದರು.

SCROLL FOR NEXT