ದೇಶ

ಭಾರತದಿಂದ ಪೃಥ್ವಿ-2 ಪರಮಾಣು ಸಾಮರ್ಥ್ಯ ಕ್ಷಿಪಣಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿ

Nagaraja AB

ಒಡಿಶಾ: ಭಾರತವು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಪರಮಾಣು ಸಾಮರ್ಥ್ಯದ ಪೃಥ್ವಿ-II ಕ್ಷಿಪಣಿಯನ್ನು ಬುಧವಾರ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. 

ಬುಧವಾರ ರಾತ್ರಿ ಸುಮಾರು 7-30ರ ಸುಮಾರಿನಲ್ಲಿ ಒಡಿಶಾದ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ  ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ-2 ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಕ್ಷಿಪಣಿಯು ಅತ್ಯಂತ ಹೆಚ್ಚಿನ ಮಟ್ಟದ ನಿಖರತೆಯೊಂದಿಗೆ ಗುರಿ ಹೊಡೆಯುವ ಸಾಮರ್ಥ್ಯವನ್ನು ಹೊಂದಿದೆ. ಪೃಥ್ವಿ-2 ಕ್ಷಿಪಣಿಗಳ ಪರೀಕ್ಷೆಯು ಯಶಸ್ವಿಯಾಗಿ ಉಡಾವಣೆಯಾಗಿದೆ ಮತ್ತು ಪರೀಕ್ಷೆಯು ಎಲ್ಲಾ ನಿಯತಾಂಕಗಳನ್ನು ಪೂರೈಸಿದೆ ಎಂದು ಡಿಆರ್ ಡಿಒ ತಿಳಿಸಿದೆ. 

350 ಕಿಮೀ ಸ್ಟ್ರೈಕ್ ರೇಂಜ್ ಹೊಂದಿರುವ ನೆಲದಿಂದ ನೆಲಕ್ಕೆ ಜಿಗಿಯುವ ಪರಮಾಣು ಸಾಮರ್ಥ್ಯದ  ಕ್ಷಿಪಣಿ ಪ್ರಯೋಗ ಯಶಸ್ವಿಯಾಗಿ  ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ. 
 

SCROLL FOR NEXT