ದೇಶ

ಎಲಾಂಟೆ ಮಾಲ್ ಫುಡ್ ಕೋರ್ಟ್‌ನಲ್ಲಿ ಗ್ರಾಹಕನಿಗೆ ನೀಡಿದ ಛೋಲೆ ಭಟೂರೆಯಲ್ಲಿ ಜೀವಂತ ಹಲ್ಲಿ; ಥಂಡ ಹೊಡೆದ ವ್ಯಕ್ತಿ!

Vishwanath S

ನವದೆಹಲಿ: ಚಂಡೀಗಢದ ಎಲಾಂಟೆ ಮಾಲ್‌ನಲ್ಲಿರುವ ಸಾಗರ್ ರತ್ನ ಫುಡ್ ಕೋರ್ಟ್‌ನಲ್ಲಿ ಗ್ರಾಹಕನಿಗೆ ನೀಡಿದ ಛೋಲೆ ಭಟೂರೆ ಪ್ಲೇಟ್‌ನಲ್ಲಿ ಹಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಟ್ವೀಟರಿಗ ಗುರಿಂದರ್ ಚೀಮಾ ಅವರು ತಮ್ಮ ದುರದೃಷ್ಟಕರ ಅನುಭವದ ಫೋಟೋವನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಮಂಗಳವಾರ ಎಲಾಂಟೆ ಮಾಲ್ ಸಾಗರ್ ರತ್ನ ಫುಡ್ ಕೋರ್ಟ್ ನಲ್ಲಿ ಅತ್ಯಂತ ಭಯಾನಕ ಅನುಭವವಾಗಿದೆ. ಭಟೂರೆ ಕೆಳಗೆ ಅರೆ ಪ್ರಜ್ಞಾವಸ್ಥೆಯಲ್ಲಿ ಜೀವಂತ ಹಲ್ಲಿ ಕಂಡುಬಂದಿತ್ತು ಎಂದು ಟ್ವೀಟಿಸಿದ್ದಾರೆ.

ಈ ಬಗ್ಗೆ ಚೀಮಾ ಚಂಡೀಗಢ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಚಂಡೀಗಢದ ಆಹಾರ ಆರೋಗ್ಯ ಇಲಾಖೆಯು ಆಹಾರದ ಮಾದರಿಗಳನ್ನು ವಶಪಡಿಸಿಕೊಂಡಿದ್ದು ಪರೀಕ್ಷೆಗೆ ಕಳುಹಿಸಿದೆ ಎಂದು ಹೇಳಿದರು.

ಭಾರತೀಯ ಜನತಾ ಪಕ್ಷದ(ಬಿಜೆಪಿ) ನಾಯಕ ರವಿ ರೈ ರಾಣಾ ಕೂಡ ಘಟನೆಯ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ನೆಟಿಜನ್‌ಗಳು ತೀವ್ರವಾಗಿ ಪ್ರತಿಕ್ರಿಯಿಸಿದ್ದು, ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಕೆಲವು ನೆಟಿಜನ್‌ಗಳು ಆಹಾರದ ಜಂಟಿ ನೈರ್ಮಲ್ಯದ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಒತ್ತಾಯಿಸಿದರು.

'ಇದು ಮೂರ್ಖತನ, ಆಹಾರವನ್ನು ತಯಾರಿಸುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು ಫುಡ್ ಕೋರ್ಟ್‌ನಲ್ಲಿ ಇದು ತುಂಬಾ ಸಾಮಾನ್ಯವಾಗಿದೆ. ಹಲವಾರು ಬಾರಿ ಜಿರಳೆಗಳು ಹರಿದಾಡುವುದನ್ನು ನೋಡಿದ್ದೇನೆ ಎಂದು ಟ್ವೀಟಿಸಿದ್ದಾರೆ.

SCROLL FOR NEXT