ದೇಶ

'ನಮ್ಮ ಜೊತೆ 50 ಶಾಸಕರು ಇದ್ದಾರೆ, ಸದ್ಯದಲ್ಲೇ ಮುಂಬೈಗೆ ಹೋಗುತ್ತೇವೆ': ಗುವಾಹಟಿ ಹೊಟೇಲ್ ನಲ್ಲಿ ಏಕನಾಥ್ ಶಿಂಧೆ ಹೇಳಿಕೆ

Sumana Upadhyaya

ಗುವಾಹಟಿ: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (MVA) ಸರ್ಕಾರದ ಅನಿಶ್ಚಿತತೆಗೆ ಕಾರಣವಾಗಿ ಬಂಡಾಯವೆದ್ದು ತಮ್ಮ ಶಾಸಕರೊಂದಿಗೆ ಗುವಾಹಟಿ ಹೋಟೆಲ್‌ನಲ್ಲಿ ಬೀಡುಬಿಟ್ಟಿರುವ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಉದ್ಧವ್ ಠಾಕ್ರೆ ಬಣಕ್ಕೆ ಮತ್ತೊಂದು ಶಾಕ್ ನೀಡಿದ್ದಾರೆ.

ತಾವು ಬೀಡುಬಿಟ್ಟಿರುವ ಹೊಟೇಲ್ ನ ಹೊರಗೆ ಮಾತನಾಡಿರುವ ಅವರು, ನಾವೆಲ್ಲರೂ ಮುಂಬೈಗೆ ಹೋಗುತ್ತಿದ್ದೇವೆ. ನಮ್ಮ ಬಳಿ ಈಗ 50 ಶಾಸಕರಿದ್ದಾರೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸ ಮತಕ್ಕಾಗಿ ಒತ್ತಾಯಿಸಲು ಶಿಂಧೆ ಅವರು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡುತ್ತಾರೆ ಎಂಬ ಊಹಾಪೋಹಗಳಿವೆ.

ಇಂದು ಅವರು ತನಗೆ 50 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದು, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮೊಂದಿಗೆ ಸೇರಿರುವ ಶಾಸಕರ ಸಂಖ್ಯೆಯನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ. "ನಾವು ಶಿವಸೇನೆಯಲ್ಲಿದ್ದೇವೆ, ನಾವು ಪಕ್ಷವನ್ನು ಮುನ್ನಡೆಸುತ್ತಿದ್ದೇವೆ, ಅದರಲ್ಲಿ ಯಾವುದೇ ಅನುಮಾನ ಬೇಡ, ನಮ್ಮ ಮುಂದಿನ ಕ್ರಮ ಬಗ್ಗೆ ನಿಮಗೆ ತಿಳಿಸುತ್ತೇವೆ ಎಂದಿದ್ದಾರೆ. 

ಇಲ್ಲಿರುವ ಯಾವುದೇ ಶಾಸಕರನ್ನು ನಿಮಗೆ ಹತ್ತಿಕ್ಕಲು ಸಾಧ್ಯವಿಲ್ಲ. ಇಲ್ಲಿ ಎಲ್ಲರೂ ಸಂತೋಷವಾಗಿದ್ದಾರೆ, ಶಾಸಕರು ನಮ್ಮೊಂದಿಗಿದ್ದಾರೆ, ಇಲ್ಲಿರುವ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಶಿವಸೇನೆ ಹೇಳಿದರೆ, ಅವರ ಹೆಸರನ್ನು ಬಹಿರಂಗಪಡಿಸಿ ಎಂದು ಕೂಡ ಏಕನಾಥ್ ಶಿಂಧೆ ಉದ್ಧವ್ ಠಾಕ್ರೆ ಬಣಕ್ಕೆ ಸವಾಲು ಹಾಕಿದ್ದಾರೆ.

SCROLL FOR NEXT