ದೇಶ

ಸರ್ಕಾರದ ಮನವಿಗೆ ಒಪ್ಪಿಗೆ: ಅಟಾರ್ನಿ ಜನರಲ್ ಆಗಿ ಕೆಕೆ ವೇಣುಗೋಪಾಲ್ ಮುಂದುವರಿಕೆ

Srinivasamurthy VN

ನವದೆಹಲಿ: ಕೇಂದ್ರ ಸರ್ಕಾರದ ಮನವಿ ಮೇರೆಗೆ ಕೆಕೆ ವೇಣುಗೋಪಾಲ್ ಅವರು ಭಾರತ ಸರ್ಕಾರದ ಅಟಾರ್ನಿ ಜನರಲ್ ಆಗಿ ಮುಂದುವರೆಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಸುದ್ದಿಸಂಸ್ಥೆ ವರದಿ ಮಾಡಿದ್ದು, ಹಾಲಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರ ಸೇವಾವಧಿ ಜೂನ್ 30, 2022ಕ್ಕೆ ಕೊನೆಯಾಗಲಿದ್ಜು, ಇದೇ ಕಾರಣಕ್ಕೆ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಆಗಿ ಮುಂದುವರೆಯಲು ಕೆ.ಕೆ ವೇಣುಗೋಪಾಲ್ ಅವರನ್ನು ಕೇಂದ್ರ ಸರ್ಕಾರ ಮನವಿ ಮಾಡಿತ್ತು.

ಈ ಮನವಿಗೆ ಸ್ಪಂದಿಸಿರುವ ಕೆಕೆ ವೇಣುಗೋಪಾಲ್ ಅವರು, ಅಟಾರ್ನಿ ಜನರಲ್ ಆಗಿ ಸೇವೆ ಮುಂದುವರೆಸಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆಯೂ ಕೂಡ ಕೆಕೆ ವೇಣುಗೋಪಾಲ್ ಅವರು ಜೂನ್ 30, 2022ರವರೆಗೆ ಸೇವಾವಧಿ ವಿಸ್ತರಣೆಗೆ ಒಪ್ಪಿಗೆ ನೀಡಿದ್ದರು. ಇದೀಗ ಮತ್ತೆ 3 ತಿಂಗಳ ಅವಧಿಗೆ ಅವರ ಅಧಿಕಾರಾವಧಿ ವಿಸ್ತರಣೆಯಾದಂತಾಗಿದೆ.

91 ವರ್ಷದ ವೇಣುಗೋಪಾಲ್ ಅವರನ್ನು ಜುಲೈ 2017 ರಲ್ಲಿ ಭಾರತದ ಅಟಾರ್ನಿ ಜನರಲ್ ಆಗಿ ಭಾರತದ ರಾಷ್ಟ್ರಪತಿಗಳು ನೇಮಕ ಮಾಡಿದ್ದರು. ಮುಕುಲ್ ರೋಹಟಗಿ ಬಳಿಕ ಆ ಸ್ಥಾನಕ್ಕೆ ವೇಣುಗೋಪಾಲ್ ರನ್ನು ನೇಮಸಲಾಗಿತ್ತು. ಸುಪ್ರೀಂ ಕೋರ್ಟ್‌ನ ಖ್ಯಾತ ವಕೀಲರಾದ ವೇಣುಗೋಪಾಲ್ ಅವರು ಸಾಂವಿಧಾನಿಕ ಮತ್ತು ಕಾರ್ಪೊರೇಟ್ ಕಾನೂನಿನ ಪ್ರಮುಖ ವಿಷಯಗಳನ್ನು ಒಳಗೊಂಡಿರುವ ಹೆಚ್ಚಿನ ಸಂಖ್ಯೆಯ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ. 1979 ಮತ್ತು 1980 ರ ನಡುವೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಅವರಿಗೆ 2002 ರಲ್ಲಿ ಪದ್ಮಭೂಷಣ ಮತ್ತು 2015 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

SCROLL FOR NEXT