ದೇಶ

ಗುಜರಾತ್ ಸೇತುವೆ ಕುಸಿತ: ಪ್ರಧಾನಿ ನರೇಂದ್ರ ಮೋದಿ ಭೇಟಿ ಬೆನ್ನಲ್ಲೇ ಮೋರ್ಬಿ ಆಸ್ಪತ್ರೆಯನ್ನು ಸಿಂಗರಿಸಿದ ಅಧಿಕಾರಿಗಳು

Ramyashree GN

ಮೊರ್ಬಿ: ಗುಜರಾತಿನ ಮೊರ್ಬಿಯ ಭಾನುವಾರ ಗುಜರಾತಿನ ತೂಗುಸೇತುವೆ ಕುಸಿದು 134 ಸಾವಿಗೀಡಾದ ಮತ್ತು ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡುವ ಬೆನ್ನಲ್ಲೇ ಆಸ್ಪತ್ರೆಯನ್ನು ನೋಟವನ್ನು ಬದಲಾಯಿಸಲಾಗಿದೆ.

ಮೋದಿಯವರ ಭೇಟಿಗೆ ಮುನ್ನ ಮಂಗಳವಾರದ ನಂತರ ಕಾರ್ಮಿಕರು 300 ಹಾಸಿಗೆಗಳ ಆಸ್ಪತ್ರೆಯ ಒಂದು ಭಾಗವನ್ನು ಸ್ವಚ್ಛಗೊಳಿಸುವುದು ಮತ್ತು ಬಣ್ಣ ಬಳಿಯುವುದು ಕಂಡುಬಂದಿದೆ.

ತೂಗು ಸೇತುವೆ ಕುಸಿತದಿಂದ ಗಾಯಗೊಂಡಿರುವ ಆರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾಲ್ಕೈದು ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 56 ಜನರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ  ಎಂದು ವೈದ್ಯರು ತಿಳಿಸಿದ್ದಾರೆ.

ಪ್ರವೇಶ ದ್ವಾರದ ಭಾಗಗಳಿಗೆ ಹಳದಿ ಬಣ್ಣ ಬಳಿಯಲಾಗಿದ್ದು, ಆಸ್ಪತ್ರೆಯ ಒಳಭಾಗಕ್ಕೆ ಬಿಳಿ ಬಣ್ಣ ಬಳಿಯಲಾಗಿದೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಮೋದಿ ಭೇಟಿಗೆ ಮುನ್ನ ಮೊರ್ಬಿ ಆಸ್ಪತ್ರೆಯೊಳಗೆ ದುರಸ್ತಿ ಕಾರ್ಯ ನಡೆಯುತ್ತಿರುವುದನ್ನು ತೋರಿಸುವ ಚಿತ್ರಗಳನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕಾಂಗ್ರೆಸ್ ಪೋಸ್ಟ್ ಮಾಡಿದ ಫೋಟೋಗಳು ಮೊರ್ಬಿ ಆಸ್ಪತ್ರೆಯೊಳಗೆ ರಾತ್ರಿಯಿಡೀ ದುರಸ್ತಿ ಕಾರ್ಯ ನಡೆಸುತ್ತಿರುವುದನ್ನು ತೋರಿಸಿದೆ. ಇದರಲ್ಲಿ ಹೊಸ ಪೇಂಟ್, ಗೋಡೆಗಳ ಮೇಲೆ ಹೊಸ ಟೈಲ್ಸ್ ಮತ್ತು ಆಸ್ಪತ್ರೆಯನ್ನು ಅಲಂಕರಿಸಲು ಸಣ್ಣ ನಿರ್ಮಾಣ ಕಾರ್ಯಗಳು ಸೇರಿವೆ.

ಮೊರ್ಬಿ ಸೇತುವೆ ಕುಸಿತ ಪ್ರಕರಣ ವಿಚಾರವಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ನೂರಾರು ಜನರು ಸಾವಿಗೀಡಾಗಿದ್ದರೂ, ಆಡಳಿತ ಪಕ್ಷವು ಈ ದುರಂತವನ್ನು ಬಳಸಿಕೊಂಡು ರಾಜಕೀಯ ಮಾಡುವಲ್ಲಿ ತೊಡಗಿಕೊಂಡಿದೆ. ದುರಂತದ ಕಾರ್ಯಕ್ರಮ ಮಾಡುತ್ತಿದೆ. ಆಸ್ಪತ್ರೆಯಲ್ಲಿ ಪ್ರಧಾನಿ ಮೋದಿಯವರ ಫೋಟೋಶೂಟ್ ನಡೆಸಲು ಈ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಟ್ವೀಟ್ ಮಾಡಿದೆ.

ಅವರಿಗೆ ನಾಚಿಕೆಯಿಲ್ಲ. ಅನೇಕ ಜನರು ಸತ್ತಿದ್ದಾರೆ ಮತ್ತು ಇವರು ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದ್ದರೆ, ಗುಜರಾತ್ ವಿಧಾನಸಭೆಯ ಎಲ್ಲಾ 182 ಸ್ಥಾನಗಳಿಗೆ ಸ್ಪರ್ಧಿಸುತ್ತಿರುವ ಆಮ್ ಆದ್ಮಿ ಪಕ್ಷವು ಆಸ್ಪತ್ರೆಗೆ ಬಣ್ಣ ಬಳಿಯುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದೆ.

'ಮೋರ್ಬಿ ಸಿವಿಲ್ ಆಸ್ಪತ್ರೆಗೆ ರಾತ್ರೋರಾತ್ರಿ ಬಣ್ಣ ಬಳಿಯಲಾಗುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋಶೂಟ್ ಸಮಯದಲ್ಲಿ ಕಟ್ಟಡದ ಕಳಪೆ ಸ್ಥಿತಿಯು ಬಹಿರಂಗಗೊಳ್ಳುವುದಿಲ್ಲ' ಎಂದು ಎಎಪಿ ಹೇಳಿಕೊಂಡಿದೆ.

SCROLL FOR NEXT