ದೇಶ

ತೆಲಂಗಾಣ: ಹಣ ಇಲ್ಲದೆ ಮಗಳ ಶವವನ್ನು ಬೈಕ್‌ನಲ್ಲಿ 68 ಕಿ.ಮೀ  ಕೊಂಡೊಯ್ದ ಆದಿವಾಸಿ ದಂಪತಿ

Lingaraj Badiger

ಖಮ್ಮಂ: ಬುಡಕಟ್ಟು ಜನಾಂಗದ ದಂಪತಿಗಳು ತಮ್ಮ ಮೂರು ವರ್ಷದ ಮಗಳ ಶವವನ್ನು ಬೈಕ್ ನಲ್ಲಿ ಸುಮಾರು 68 ಕಿಲೋಮೀಟರ್ ದೂರ ಸಾಗಿಸಿದ ಭೀಕರ ಘಟನೆ ತೆಲಂಗಾಣದ ಖಮ್ಮಂನಲ್ಲಿ ನಡೆದಿದೆ.

ಆದಿವಾಸಿ ದಂಪತಿಯ ಮಗಳು ಜ್ವರ ಮತ್ತು ಫಿಟ್ಸ್‌ನಿಂದ ಖಮ್ಮಂ ಪ್ರಧಾನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಶವ ತೆಗೆದುಕೊಂಡು ಹೊಗಲು ಬಾಡಿಗೆ ಆಂಬ್ಯುಲೆನ್ಸ್ ಪಡೆಯಲು ಬಡ ದಂಪತಿ ಬಳಿ ಹಣ ಇರಲಿಲ್ಲ. ಹೀಗಾಗಿ ತಮ್ಮ ಮಗಳ ಮೃತದೇಹವನ್ನು ಬೈಕ್ ನಲ್ಲಿ ಖಮ್ಮಂನಿಂದ 68 ಕಿಲೋಮೀಟರ್ ದೂರದಲ್ಲಿರುವ ತಮ್ಮ ಸ್ವಗ್ರಾಮ ಎಂಕೂರ್ ಮಂಡಲದ ಕೊತ್ತಮೆಡೆಪಲ್ಲಿಗೆ ಕೊಂಡೊಯ್ದಿದ್ದಾರೆ.

ಮಾಹಿತಿ ಪ್ರಕಾರ, ವೆಟ್ಟಿ ಮಲ್ಲ ಮತ್ತು ಆದಿ ದಂಪತಿಯ ಪುತ್ರಿ ಮೂರು ವರ್ಷದ ಸುಕ್ಕಿ ಜ್ವರ ಮತ್ತು ಫಿಟ್ಸ್‌ನಿಂದ ಬಳಲುತ್ತಿದ್ದರು. ಆಕೆಯನ್ನು ಏಣ್ಕೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು.

ನಂತರ, ವೈದ್ಯರ ಸಲಹೆ ಮೇರೆಗೆ, ಅವರು ಸೋಮವಾರ ಬೆಳಗ್ಗೆ ಮಗಳನ್ನು ಖಮ್ಮಂ ಪ್ರಧಾನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ವೇಳೆ ಮಗು ಸಾವನ್ನಪ್ಪಿದೆ.

‘ಆಸ್ಪತ್ರೆ ಸಿಬ್ಬಂದಿ ಯಾವುದೇ ಕರುಣೆ ತೋರಿಲ್ಲ ಮತ್ತು ಶವವನ್ನು ಸ್ಥಳಾಂತರಿಸಲು ಆಂಬ್ಯುಲೆನ್ಸ್ ಒದಗಿಸಲಿಲ್ಲ’ ಎಂದು ಮಗುವಿನ ತಂದೆ ಆರೋಪಿಸಿದ್ದಾರೆ.

SCROLL FOR NEXT