ದೇಶ

ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ: ಕೇರಳ ರಾಜ್ಯಪಾಲರ ಇಬ್ಬರು ಕಾನೂನು ಸಲಹೆಗಾರರ ರಾಜೀನಾಮೆ

Srinivasamurthy VN

ಕೊಚ್ಚಿನ್: ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ವ್ಯಾಪಕ ಸುದ್ದಿಯಾಗುತ್ತಿರುವಂತೆಯೇ ಕೇರಳ ರಾಜ್ಯಪಾಲರ ಇಬ್ಬರು ಕಾನೂನು ಸಲಹೆಗಾರರು ರಾಜಿನಾಮೆ ನೀಡಿದ್ದಾರೆ.

ಕೇರಳ ರಾಜ್ಯಪಾಲರ ಕಾನೂನು ಸಲಹೆಗಾರರು ಮತ್ತು ರಾಜ್ಯದ ವಿಶ್ವವಿದ್ಯಾನಿಲಯಗಳ ಕುಲಪತಿಗಳ ಸ್ಥಾಯಿ ಸಲಹೆಗಾರರು ಮಂಗಳವಾರ ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. 

2009ರ ಫೆಬ್ರವರಿಯಲ್ಲಿ ರಾಜ್ಯಪಾಲರ ಗೌರವ ಕಾನೂನು ಸಲಹೆಗಾರರಾಗಿ ನೇಮಕಗೊಂಡಿದ್ದ ಹಿರಿಯ ವಕೀಲ ಕೆ.ಜಾಜು ಬಾಬು ಮತ್ತು ಕುಲಪತಿಗಳ ಸ್ಥಾಯಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದ ವಕೀಲ ಎಂ.ಯು.ವಿಜಯಲಕ್ಷ್ಮಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. 

ಇಬ್ಬರೂ ಒಂದೇ ಕಾನೂನು ಸಂಸ್ಥೆಯವರಾಗಿದ್ದು, ಬಾಬು ಮತ್ತು ಬಾಬು- ಕೇರಳದ 11 ವಿಶ್ವವಿದ್ಯಾಲಯಗಳ ಕುಲಪತಿಗಳು ವಿಶ್ವವಿದ್ಯಾಲಯದ ಸೆನೆಟ್ ಮತ್ತು ವೈಸ್ ಚಾನ್ಸಿಲರ್ ವಿರುದ್ಧ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಅವರು ತೆಗೆದುಕೊಂಡ ಕ್ರಮಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವ್ಯಾಜ್ಯದಲ್ಲಿ ರಾಜ್ಯಪಾಲರನ್ನು ಪ್ರತಿನಿಧಿಸುತ್ತಿದ್ದರು ಎನ್ನಲಾಗಿದೆ.
 

SCROLL FOR NEXT